ಕಲಬುರ್ಗಿ: ಅನುಮಾನಾಸ್ಪದ ಬೆಂಕಿ ಅನಾಹುತ, ಒಂದೇ ಕುಟುಂಬದ ನಾಲ್ವರಿಗೆ ಗಾಯ

ಮನೆಯಲ್ಲಿ ಅನುಮಾನಾಸ್ಪದ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರ್ಗಿ ಇಕ್ಬಾಲ್ ಕಾಲೋನಿಯಲ್ಲಿ ನಡೆದಿದೆ.
ಕಲಬುರ್ಗಿ: ಅನುಮಾನಾಸ್ಪದ ಬೆಂಕಿ ಅನಾಹುತ, ಒಂದೇ ಕುಟುಂಬದ ನಾಲ್ವರಿಗೆ ಗಾಯ
ಕಲಬುರ್ಗಿ: ಅನುಮಾನಾಸ್ಪದ ಬೆಂಕಿ ಅನಾಹುತ, ಒಂದೇ ಕುಟುಂಬದ ನಾಲ್ವರಿಗೆ ಗಾಯ
Updated on: 
ಕಲಬುರ್ಗಿ: ಮನೆಯಲ್ಲಿ ಅನುಮಾನಾಸ್ಪದ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರ್ಗಿ ಇಕ್ಬಾಲ್ ಕಾಲೋನಿಯಲ್ಲಿ ನಡೆದಿದೆ.
ಬುಧವಾರ ಬೆಳಗಿನ ಜಾವದಲ್ಲಿ ಸಂಭವಿಸಿದ ಈ ಅನಾಹುತದಲ್ಲಿ ಅಕ್ಬರ್ (37), ಅವರ ಪತ್ನಿ ಶನು (35), ಮಕ್ಕಳಾದ  ಮೊಹಮ್ಮದ್ ಯಾಸಿನ್ ಮತ್ತು ಸಾನಿಯಾ ಗೆ ಸುಟ್ಟ ಗಾಯಗಲಾಗಿದೆ  ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಭಾಗೀಯ ಸಹಾಯಕ ಅಧೀಕ್ಷಕ ಪೊಲೀಸ್ ಅಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ನಾಲ್ಕು ಜನರಿಗೆ 80 ಪ್ರತಿಶತದಷ್ಟು ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಿದ ಸಮಯದಲ್ಲಿ ಪೋಲೀಸರು ಅವರಿಂದಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇದೀಗ ಬಂದ ಮಾಹಿತಿಯಂತೆ ಅವರೆಲ್ಲರೂ ಕೋಮಾ ಸ್ಥಿತಿಯಲ್ಲಿದ್ದಾರೆ.
ನೆರೆಮನೆಯವರಾದ ಶಬಾನಾ ಬೇಗಮ್ ಬುಧವಾರ ನಾಲ್ಕಕ್ಕೆ ಏಳುವಾಗ ಅವರು ಅಕ್ಬರ್ ಮನೆಯಲ್ಲಿ ಬೆಂಕಿ ಹಾಗು ಸುಟ್ಟ ವಾಸನೆಯನ್ನು ಗುರುತಿಸಿದ್ದಾರೆ. ಹಾಗೆಯೇ ಅವರು ಇತರರನ್ನು ಸಹ ಎಚ್ಚರಿಸಿ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಪೋಲೀಸರು, ಅಗ್ನಿಶಾಮಕ ದಳಕ್ಕೆ ಸುದ್ದಿ ತಲುಪಿದ್ದು ಎರಡು ಗಂಟೆಗಳಲ್ಲಿ ಬೆಂಕಿ ತಹಬಂದಿಗೆ ಬಂದಿದೆ.
ಬೆಂಕಿ ನಾಹುತಕ್ಕೆ ಕಾರಣವೇನೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಗಾಯಾಳುಗಳು ಒಬ್ಬೊಬ್ಬರೂ ವಿಭಿನ್ನ ಹೇಳಿಕೆ ನಿಡಿದ್ದು ಅವಘಡ ಹೇಗೆ ಸಂಭವಿಸಿದೆ ಎನ್ನುವುದು ಗಾಯಾಳುಗಳು ಕೋಮಾದಿಂದ ಹೊಅಬಂದು ವಿಚಾರಣೆ ಎದುರಿಸಿದ ಬಳಿಕವೇ ತಿಳಿಸ್ಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com