ಮಗಳನ್ನು ಕರೆತಂದಿದ್ದ ತಂದೆಗೆ ಮಕ್ಕಳ ಕಳ್ಳನೆಂದು ಥಳಿತ!

ತನ್ನ ಮಗುವಿನೊಂದಿಗೆ ಬಂದಿದ್ದ ಪಾನಮತ್ತ ತಂದೆಯನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಸಾರ್ವಜನಿಕರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ...
ಮಗಳನ್ನು ಕರೆತಂದಿದ್ದ ತಂದೆಗೆ ಮಕ್ಕಳ ಕಳ್ಳನೆಂದು ಥಳಿತ!
ಮಗಳನ್ನು ಕರೆತಂದಿದ್ದ ತಂದೆಗೆ ಮಕ್ಕಳ ಕಳ್ಳನೆಂದು ಥಳಿತ!
Updated on
ಬೆಳ್ತಂಗಡಿ: ತನ್ನ ಮಗುವಿನೊಂದಿಗೆ ಬಂದಿದ್ದ ಪಾನಮತ್ತ ತಂದೆಯನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಸಾರ್ವಜನಿಕರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. 
ಬೆಳ್ತಂಗಡಿ ತಾಲೂಕಿನ ಕಿಕ್ಕಿಂಜೆ ನಿವಾಸಿ ಖಾಲಿದ್ (40) ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಉಜಿರೆಗೆ ಕರೆದುಕೊಂಡು ಬಂದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಖಾಲಿದ್ ಮಗುವನ್ನು ಹೊಡೆದಿದ್ದಾನೆ. ಈ ವೇಳೆ ಮಗು ಅಳಲು ಆರಂಭಿಸಿದೆ. 
ಇದನ್ನು ಕಂಡ ಸ್ಥಳೀಯರು ಈತ ಮಕ್ಕಳ ಕಳ್ಳನೆಂದು ಭಾವಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ. ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಮಗು ಆತನದ್ದೇ ಎಂಬುದು ತಿಳಿದುಬಂದಿದೆ. ಬಳಿಕ ವ್ಯಕ್ತಿಯನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com