ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆಯೇ? ಈ ಆಪ್ ಬಳಸಿ

ನಗರದೊಳಗೆ ಯಾವುದಾದರೂ ಕೆಲಸ ನಿಮಿತ್ತ ಹೋಗಬೇಕೆಂದರೆ ಟ್ರಾಫಿಕ್ ಸಮಸ್ಯೆ ಜೊತೆಗೆ ವಾಹನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದೊಳಗೆ ಯಾವುದಾದರೂ ಕೆಲಸ ನಿಮಿತ್ತ ಹೋಗಬೇಕೆಂದರೆ ಟ್ರಾಫಿಕ್ ಸಮಸ್ಯೆ ಜೊತೆಗೆ ವಾಹನ ನಿಲ್ಲಿಸಲು ಪಾರ್ಕಿಂಗ್ ಸಮಸ್ಯೆ ಎಂದು ನೀವು ಎಷ್ಟು ಬಾರಿ ಗೊಣಗಿಕೊಂಡಿರಬಹುದು. ಇನ್ನು ಕೆಲವರು ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ಪೊಲೀಸರು ಎತ್ತಿಕೊಂಡು ಹೋಗಿ ದಂಡ ಕಟ್ಟಿ ವಾಹನ ಬಿಡಿಸಿಕೊಂಡು ಬಂದ ಪ್ರಸಂಗವಿರಬಹುದು.

ಈ ಎಲ್ಲದರ ಸಮಸ್ಯೆ ಬೇಡ, ಮೆಟ್ರೊದಲ್ಲಿ ಹೋಗಿಬಿಡೋಣ ಎಂದು ಮನೆಯ ಹತ್ತಿರ ಮೆಟ್ರೊ ರೈಲಿನ ಸೌಲಭ್ಯವಿರುವವರು ಅಂದುಕೊಂಡಿರಬಹುದು.ಇದೀಗ ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಮಾಡುವ ಸಮಸ್ಯೆಗೆ ಡಿಜಿಟಲ್ ಪರಿಹಾರ ಕಂಡುಹಿಡಿಯಲಾಗಿದೆ. ಇಲ್ಲಿರುವ ಒಂದು ಆಪ್ ಮೂಲಕ ವಾಹನ ಚಾಲಕರು ತಮ್ಮ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಲು ಒಂದು ಜಾಗ ಕಂಡುಕೊಳ್ಳಬಹುದು.

ಗೆಟ್ ಮೈ ಪಾರ್ಕಿಂಗ್ ಎಂಬ ಮೂರು ವರ್ಷಗಳ ಹಿಂದೆ ಆರಂಭಗೊಂಡ ಸ್ಟಾರ್ಟ್ ಅಪ್ ಮತ್ತೊಂದು ಪಾರ್ಕಿಂಗ್ ಪರಿಹಾರದ ಆಪ್ ನ್ನು ಕಂಡುಹಿಡಿದಿದೆ, ಅದು 'ಕಾನ್ಸ್ಟಪಾರ್ಕ್' ಎಂದಾಗಿದ್ದು, ಡಿಜಿಟಲೀಕರಣ ಮೂಲಕ ಇಡೀ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಿದೆ.

ಈ ಆಪ್ ಮೂಲಕ ನಿರ್ದಿಷ್ಟ ಸ್ಥಳದಲ್ಲಿ ನಿಗದಿತ ಪಾರ್ಕಿಂಗ್ ವ್ಯವಸ್ಥೆಯನ್ನು ನೀಡಲಾಗುತ್ತದೆ. ರೇಡಿಯೊ-ಫ್ರೀಕ್ವೆನ್ಸಿ ಗುರುತು ಚಿಪ್(ಆರ್ ಎಫ್ಐಡಿ), ನಿಯರ್ ಫೀಲ್ಡ್ ಕಮ್ಯುನಿಕೇಶನ್(ಎನ್ಎಫ್ ಸಿ) ಅಥವಾ ಕ್ವಿಕ್ ರೆಸ್ಪಾನ್ಸ್ (ಕ್ಯುಆರ್) ಸೂಚನೆ ಮೂಲಕ ವಾಹನ ಚಾಲಕರಿಗೆ ಸಹಾಯ ಮಾಡಲಿದೆ.

ಇದರ ಮೂಲಕ ವಾಹನ ಚಾಲಕರಿಗೆ ತಮ್ಮ ಹತ್ತಿರದ ಸ್ಥಳದಲ್ಲಿ ಕಾರು ಪಾರ್ಕ್ ಮಾಡಲು ಸ್ಥಳವನ್ನು ತೋರಿಸುತ್ತದೆ ಮತ್ತು ಅದು ಟಿಕೆಟ್ ರಹಿತ, ಸ್ವಯಂಚಾಲಿತ ಮತ್ತು ನಗದುರಹಿತವಾದ ಪಾರದರ್ಶಕ ಬಿಲ್ಲಿಂಗ್ ಸೌಲಭ್ಯವನ್ನು ಹೊಂದಿದೆ. ಇದರ ಪ್ರಾಯೋಗಿಕ ಯೋಜನೆಗಳನ್ನು ಕೆಲವು ಖಾಸಗಿ ವಾಣಿಜ್ಯ ಸಂಕೀರ್ಣಗಳಲ್ಲಿ ಈಗಾಗಲೇ ಮಾಡಲಾಗುತ್ತಿದ್ದು, ಅದರ ಲಭ್ಯತಾ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಇದನ್ನು ಬೆಂಗಳೂರು ನಗರದ ಹಲವು ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಜಿಎಂಪಿ ಸಹ ಸ್ಥಾಪಕ ರಸಿಕ್ ಪನ್ಸರೆ ತಿಳಿಸಿದ್ದಾರೆ.

ಪ್ರಾಯೋಗಿಕ ಪಾರ್ಕಿಂಗ್ ಸಾಧ್ಯತೆಗಳನ್ನು ಕೋರಮಂಗಲ, ಎಂ ಜಿ ರಸ್ತೆ ಮತ್ತು ವೈಟ್ ಫೀಲ್ಡ್ ಗಳಲ್ಲಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com