ಪ್ರಯಾಣಿಕರ ಸುರಕ್ಷತೆಗೆ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳ ಆರಂಭಕ್ಕೆ ಸರ್ಕಾರ ಚಿಂತನೆ

ಪ್ರಯಾಣಿಕರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಆಂತರಿಕ ಸಾರಿಗೆ ...
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ

ಬೆಂಗಳೂರು: ಪ್ರಯಾಣಿಕರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಆಂತರಿಕ ಸಾರಿಗೆ ವ್ಯವಸ್ಥೆಯಡಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಖಾಸಗಿ ಕ್ಯಾಬ್ ಚಾಲಕರು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುವುದು, ಅಪಹರಿಸಲು ಯತ್ನಿಸುವುದು, ಅತ್ಯಾಚಾರವೆಸಗಲು ಪ್ರಯತ್ನಿಸುವ ಪ್ರಕರಣ ವರದಿಯಾಗುತ್ತಿರುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲು ಚಿಂತನೆ ನಡೆಸಿದೆ ಎಂದು  ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ಗುರುವಾರ ನಸುಕಿನ ಜಾವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ನಲ್ಲಿ ಹೋಗುತ್ತಿದ್ದ 23 ವರ್ಷದ ಯುವತಿಯನ್ನು ಕ್ಯಾಬ್ ಚಾಲಕ ಅಪಹರಿಸಲು ಯತ್ನಿಸಿದ್ದನು. ಯುವತಿ ಕಾರಿನ ಕಿಟಕಿ ಹೊಡೆಯುತ್ತಿದ್ದುದನ್ನು ನೋಡಿ ಟೋಲ್ ಪ್ಲಾಜಾ ಬಳಿ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದರು.

ಇದಕ್ಕೂ ಮುನ್ನ ಮತ್ತೊಬ್ಬ ಯುವತಿ ವಿಮಾನ ನಿಲ್ದಾಣಕ್ಕೆ ಆಪ್ ಆಧಾರಿತ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ ಮಾರ್ಗ ಬದಲಾಯಿಸಿ ಅತ್ಯಾಚಾರವೆಸಗಿದ್ದ. ಕೊನೆಗೆ ಚಾಲಕ ಬಂಧಿತನಾಗಿದ್ದ.

ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಕ್ಯಾಬ್ ಸೇವೆ ಪಡೆಯಲು ಮಹಿಳಾ ಪ್ರಯಾಣಿಕರಿಗೆ ಭಯವಾಗುತ್ತದೆ. ಒಲಾ, ಉಬರ್ ನಂತಹ ಕ್ಯಾಬ್ ಕಂಪೆನಿಗಳು ಮಹಿಳಾ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಚಿವ ಸಮ್ಮಣ್ಣ ಆರೋಪಿಸುತ್ತಾರೆ. ಈ ನಿಟ್ಟಿನಲ್ಲಿ ವಿಪ್ರೊ, ಇನ್ಫೋಸಿಸ್ ನಂತಹ ಕಂಪೆನಿಗಳು ವ್ಯವಸ್ಥಾಪನಾ ತಂತ್ರದ ಸಹಾಯ ಮಾಡಿ ಖಾಸಗಿ ಕ್ಯಾಬ್ ಚಾಲಕರು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆಯಲು ಮೊಬೈಲ್ ಅಪ್ಲಿಕೇಶನ್ ಸಂಪರ್ಕ ಜಾಲ ರಚನೆ ಮಾಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡುತ್ತದೆ ಎನ್ನುತ್ತಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕನಸಿನ 'ನಮ್ಮ ಟೈಗರ್' ಆಪ್ ಆಧಾರಿತ ಟ್ಯಾಕ್ಸಿ ಸೇವೆ ಯೋಜನೆ ಜಾರಿಗೆ ಬಂದಿಲ್ಲ, ಇದಕ್ಕೆ ಹಣ ಸಂಗ್ರಹ ಮತ್ತು ತಂತ್ರಜ್ಞಾನ ವಿಷಯಗಳು ಕಾರಣವಾಗಿವೆ. ಈ ಪ್ರಸ್ತಾವನೆಯನ್ನು ಸದ್ಯದಲ್ಲಿಯೇ ನಿಗಮದ ಮುಂದೆ ತಂದು ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com