ಕರಾವಳಿ, ಮಲೆನಾಡು ಭಾಗದ ಬ್ರಾಹ್ಮಣ ಯುವಕರನ್ನು ವಿವಾಹವಾಗಲು ಬ್ರಾಹ್ಮಣ ಕನ್ಯೆಯರು ಒಪ್ಪಿಕೊಳ್ಳುವುದಿಲ್ಲ, ಇದರಲ್ಲಿಯೂ ಹಳ್ಳಿಗಳಲ್ಲಿದ್ದು ಪುರೋಹಿತ, ಅಡಿಗೆ ಕೆಲಸ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಕನ್ಯೆ ದೊರೆಯುವುದು ದುಸ್ಸಾಹಸ ಎನ್ನುವಂತಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ತಲೆ ಎತ್ತಿದ್ದು ಬ್ರಾಹ್ಮ ಪರಿಷತ್ತು ಸೇರಿ ಅನೇಕ ಸಂಘಟನೆಗಳು ಇದಕ್ಕೆ ಪರ್ಯಾಯವನ್ನು ಹುಡುಕಲು ಮುಂದಾಗಿದೆಯಾದರೂ ಸಮಸ್ಯೆ ಇನ್ನೂ ಬೃಹದಾಕಾರವಾಗಿ ಬೆಳೆಯುತ್ತಿರುವುದು ವಿಪರ್ಯಾಸವೇ ಸರಿ.