ಬೆಂಗಳೂರು: ಕ್ರಿಕೆಟ್ ಕೋಚಿಂಗ್ ಪಡೆಯಲು ಸರ ಕಳ್ಳತನ, ಇಬ್ಬರ ಬಂಧನ

ಕ್ರಿಕೆಟ್ ಆಟಗಾರರಾಗಬೇಕೆಂದು ಹಂಬಲವಿದ್ದ ಯುವಕರು ತರಬೇತಿ ಕೇಂದ್ರಕ್ಕೆ ಹಣ ಪಾವತಿಸಲು ಸಾಧ್ಯವಾಗದೆ ಸರಗಳ್ಳತನಕ್ಕೆ ತೊಡಗಿ ಪೋಲೀಸ್ ಅತಿಥಿಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಕ್ರಿಕೆಟ್ ಕೋಚಿಂಗ್ ಪಡೆಯಲು ಸರ ಕಳ್ಳತನ, ಇಬ್ಬರ ಬಂಧನ
ಬೆಂಗಳೂರು: ಕ್ರಿಕೆಟ್ ಕೋಚಿಂಗ್ ಪಡೆಯಲು ಸರ ಕಳ್ಳತನ, ಇಬ್ಬರ ಬಂಧನ
Updated on
ಬೆಂಗಳೂರು: ಕ್ರಿಕೆಟ್ ಆಟಗಾರರಾಗಬೇಕೆಂದು ಹಂಬಲವಿದ್ದ ಯುವಕರು ತರಬೇತಿ ಕೇಂದ್ರಕ್ಕೆ ಹಣ ಪಾವತಿಸಲು ಸಾಧ್ಯವಾಗದೆ ಸರಗಳ್ಳತನಕ್ಕೆ ತೊಡಗಿ ಪೋಲೀಸ್ ಅತಿಥಿಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಲಿಂಗರಾಜಪುರ ನಿವಾಸಿ  ನವೀನ್ ಶೆಟ್ಟಿ (19) ಮತ್ತು ಕನಕದಾಸ ಲೇಔಟ್ ನ ಬಲರಾಜ್ (19) ಕ್ರಿಕೆಟ್ ಕೋಚಿಂಗ್ ಗಾಗಿ ಹಣ ಹೊಂದಿಸಲು ಸರಗಳ್ಳತನ ನಡೆಸಿದ ಕಾರಣ ಯನಗರ ಉಪ ವಿಭಾಗದ ಅಪರಾಧ ದಳದ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರಿಂದ 27 ಲಕ್ಷ ರೂ. ಮೌಲ್ಯದ 900 ಗ್ರಾಂ ಆಭರಣ ಹಾಗೂ ಒಂದು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.
ಎಂಟು ತಿಂಗಳ ಹಿಂದೆ ಆರೋಪಿಗಳು ಕ್ರಿಕೆಟ್ ತರಬೇತಿಗಾಗಿ ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ಅನ್ನು ಸಂಪರ್ಕಿಸಿದ್ದಾರೆ. ಆಗ ತರಬೇತಿಗಾಗಿ ಅವರಿಗೆ 30,000 ರೂ. ಶುಲ್ಕ ಪಾವತಿಸಲು ಹೇಳಲಾಗಿತ್ತು. ಆದರೆ ಇಬ್ಬರಲ್ಲಿಯೂ ಅಷ್ಟೋಂದು ಹಣ ಇಲ್ಲದ ಕಾರಣ ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರ ಕಳ್ಳತನ ಮಾಡಲು ಪ್ರಾರಂಭಿಸಿದ್ದಾರೆ.
"ಮುಖ್ಯ ಆರೋಪಿ ನವೀನ್ ಶೆಟ್ಟಿ ರಿಚ್ಮಂಡ್ ರಸ್ತೆ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಸೇಲ್ಸ್ ಮನ್ ಆಗಿದ್ದ.ಬಲರಾಮ್ ಡೊಮೆಸ್ಟಿಕ್ ಹೆಲ್ಪರ್ ಆಗಿದ್ದ. ಇವರು ಕೋಲಾರದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು ವಾರಾಂತ್ಯದಲ್ಲಿ ಕರಿಯನಪಾಳ್ಯ ಕ್ರಿಕೆಟ್ ಮೈದಾನದಲ್ಲಿ ಭೇಟಿಯಾಗಿದ್ದರು. ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕೆಂದು ಬಯಕೆಯಿಂದ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಅಲಿ ತರಬೇತಿ ಕಿಟ್ ಹಾಗೂ 30 ಸಾವಿರ ರು. ಹಣ ಪಾವತಿಗೆ ಕೇಳಲಾಗಿದೆ" ಹಿರಿಯ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
"ತಮ್ಮಲ್ಲಿ ಅಷ್ಟು ಹಣವಿಲ್ಲ, ಸುಲಭವಾಗಿ ಹಣ ಗಳಿಸಲು ಸರ ಕಳ್ಳತನ ಮಾಡುವುದು ಎಂದು ಅವರು ತೀರ್ಮಾನಿಸಿದ್ದಾರೆ. ಜಯನಗರ 9 ನೇ ಬ್ಲಾಕ್ ನಿಂದ ನವೀನ್ ಮತ್ತು ಬಲರಾಜ್ ಬೈಕೊಮ್ದನ್ನು ಅಪಹರಿಸಿದ್ದಾರೆ. ಅಲ್ಲಿಂದ ಅವರು ವಾರಾಂತ್ಯದ ವೇಳೆ ಹೆಚ್ಚು ಟ್ರಾಫಿಕ್ ಇಲ್ಲದ ಸಮಯದಲ್ಲಿ ಸರ ಕಳ್ಳತನ ನಡೆಸುತ್ತಿದ್ದರು.ಕಳೆದ ಎಂಟು ತಿಂಗಳಲ್ಲಿ 22 ಚಿನ್ನದ ಸರವನ್ನು ಅವರು ಅಪಹರಿಸಿದ್ದಾರೆ. ಇದರಿಂದ ಅವರು  20 ಲಕ್ಷ ರು. ಸಂಪಾದಿಸಿದ್ದಾರೆ. ಇದೀಗ ಅವರು ಕ್ರಿಕೆಟ್ ಕೋಚಿಂಗ್ ಸೇರುವ ಆಸೆ ಕೈಬಿತ್ಟು ಐಷಾರಾಮಿ ಜೀವನ ನಡೆಸಲು ತೊಡಗಿದರು. ನವೀನ್ ಕೋಲಾರದಲ್ಲಿನ ತನ್ನ ತಂದೆಗೆ ಆಟೋ ರಿಕ್ಷಾವನ್ನು ಉಡುಗೊರೆಯಾಗಿ ನೀಡಿದ್ದ" ಪೋಲೀಸ್ ಅಧಿಕಾರುಇ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com