ಶವ ಹೊತ್ತುಕೊಂಡು ಪ್ರವಾಹದಲ್ಲಿ ಸಾಗುತ್ತಿರುವ ಗ್ರಾಮಸ್ಥರು
ಶವ ಹೊತ್ತುಕೊಂಡು ಪ್ರವಾಹದಲ್ಲಿ ಸಾಗುತ್ತಿರುವ ಗ್ರಾಮಸ್ಥರು

ಕುಸಿದ ಸೇತುವೆ: ಶವ ಹೊತ್ತುಕೊಂಡು ಪ್ರವಾಹ ದಾಟಿ ಸಂಸ್ಕಾರ ಮಾಡಿದ ಗ್ರಾಮಸ್ಥರು

ಗ್ರಾಮಕ್ಕೂ ಸ್ಮಶಾನಕ್ಕೂ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋದ ಕಾರಣ ಖೇಣಿ ಗೋನಕರ್ವಾಡ್ ಗ್ರಾಮಸ್ಥರು ಶವ ಹೊತ್ತು ನಡೆದುಕೊಂಡೇ ಪ್ರವಾಹ ದಾಟಿ ,...
ಕಾರಾವಾರ: ಗ್ರಾಮಕ್ಕೂ ಸ್ಮಶಾನಕ್ಕೂ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋದ ಕಾರಣ ಖೇಣಿ ಗೋನಕರ್ವಾಡ್ ಗ್ರಾಮಸ್ಥರು ಶವ ಹೊತ್ತು ನಡೆದುಕೊಂಡೇ ಪ್ರವಾಹ ದಾಟಿ ಸಂಸ್ಕಾರ ನಡೆಸಿದ್ದಾರೆ, 
ಗುರುನವಾರ ಗಾಂವ್ಕರ್ ಗ್ರಾಮದ 80 ವರ್ಷದ ಮಹಿಳೆ ಸುಶೀಲಾ ಸಾವನ್ನಪ್ಪಿದ್ದರು,  ಗಾಂವ್ಕರ್ ಗ್ರಾಮ ಅಂಕೋಲಾ ಮುನಿಸಿಪಾಲಿಟಿ ವ್ಯಾಪ್ತಿಗೆ ಬರುತ್ತದೆ, ಒಂದು ತೊರೆ ಇಲ್ಲಿ ಹರಿಯುತ್ತಿದ್ದು ಸ್ಮಶಾನ ಮತ್ತು ಗ್ರಾಮವನ್ನು ಪ್ರತ್ಯೇಕಿಸುತ್ತದೆ. ಕಳೆದ ಬಾರಿ ಸುರಿದ ಧಾರಾಕಾರಾ ಮಳೆಯಿಂದ ಸೇತುವೆ ಕೊಚ್ಚಿ ಹೋಗಿದೆ. 
ಹೀಗಾಗಿ ಸ್ಮಶಾನಕ್ಕೆ ಶವವನ್ನು ಹೊತ್ತುಕೊಂಡು ಕಾಲಿನಲ್ಲೆ ನಡೆದುಕೊಂಡು ಹೋಗಿ ಸಮಾಧಿ ಮಾಡಲಾಯಿತು. ಹೊಳೆ ದಾಟಲು ಸಾಧ್ಯವಾಗದ ಕಾರಣ ಹಲವು ಮಹಿಳೆಯರು ಹಾಗೂ ಹಲವು ಪುರುಷರು ಅಂತಿಮ  ಸಂಸ್ಕಾರದಲ್ಲಿ ಭಾಗವಹಿಸಲಿಲ್ಲ. ಕಳೆದ ಮಳೆಗಾಲದಲ್ಲಿ ಸೇತುವೆ ಕೊಚ್ಚಿ ಹೋಗಿದೆ ಹೀಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಮುನಿಸಿಪಲ್ ಕೌನ್ಸಿಲ್ ದುರಸ್ತಿ ಕಾರ್ಯ ತೆಗೆದುಕೊಳ್ಳದ್ದಕ್ಕೆ ಜನತೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಕೊಡಗಿನಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆ ಬಂದ್ ಆಗಿದ್ದು ಮರಗಳು ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com