ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆಯಲಾದ ವಿವರ ಆಧಾರದಲ್ಲಿ ರಾಷ್ಟ್ರಪತಿ ಭವನ ಆವರಣದಲ್ಲಿರುವ ಉದ್ಯಾನಗಳ ನಿರ್ವಹಣೆಗೆ ಕಳೆದ ಮೂರು ವರ್ಷಗಳಲ್ಲಿ 12.70 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬೆಳಗಾವಿಯ ಅನುಭವಿ ಆರ್ ಟಿಐ ಕಾರ್ಯಕರ್ತನಾದ ಭೀಮಪ್ಪ ಗಡದ ಸಲ್ಲಿಸಿದ್ದ ಅರ್ಜಿಗೆ ದೊರಕಿರುವ ಪ್ರತಿಕ್ರಿಯೆಯಲ್ಲಿ {ಮೇ 22, 2018 ರ ದಿನಾಂಕ} ಕಳೆದ ಮೂರು ವರ್ಷಗಳಿಂದ ಉದ್ಯಾನವ ನಿರ್ವಹಣೆ ಖರ್ಚು ವೆಚ್ಚಗಳ ಮಾಹಿತಿ ಒದಗಿಸಲಾಗಿದೆ.