ಕೆಆರ್ ಎಸ್ ನಲ್ಲಿ ಹೆಚ್ಚಿದ ಹೊರ ಹರಿವು: ಶ್ರೀರಂಗಪಟ್ಟಣದ ದೇವಾಲಯಗಳು ಜಲಾವೃತ!

ಕೃಷ್ಣ ರಾಜ ಸಾಗರ ಜಲಾಶಯದಲ್ಲಿ ಹೊರ ಹರಿವು ಸತತವಾಗಿ ಹೆಚ್ಚಿದೆ. ಹಾಗಾಗಿ ಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ದೇವಾಲಯಗಳ ಸಮುಚ್ಚಯ ...
ಪಶ್ಚಿಮಾವತಿ ಗಣಪತಿ ದೇವಾಲಯ
ಪಶ್ಚಿಮಾವತಿ ಗಣಪತಿ ದೇವಾಲಯ
Updated on
ಮಂಡ್ಯ: ಕೃಷ್ಣ ರಾಜ ಸಾಗರ ಜಲಾಶಯದಲ್ಲಿ ಹೊರ ಹರಿವು ಸತತವಾಗಿ ಹೆಚ್ಚಿದೆ. ಹಾಗಾಗಿ ಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ದೇವಾಲಯಗಳ ಸಮುಚ್ಚಯ ಮುಳುಗುತ್ತಿದ್ದು ಭಕ್ತಾದಿಗಳಿಗೆ ಅನಾನುಕೂಲವಾಗಿದೆ.
ನೀರಿನ ಒಳಹರಿವಿನಲ್ಲಿ ವ್ಯತ್ಯಯವಾಗಿದ್ದು, 73,159 ಕ್ಯೂಸೆಕ್ಸ್ ಇತ್ತು, ಕೆಆರ್ ಎಸ್ ಜಲಾಶಯದ ಗರಿಷ್ಟ ನೀರಿನ ಮಟ್ಟ, 124.80 ಇದ್ದಿ, ಈಗಾಗಲೇ 123.27 ಅಡಿ ನೀರು ಸಂಗ್ರಹವಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ಗೌತಮ ದೇವಾಲಯ ಮತ್ತು ನಿಮಿಷಾಂಭ ದೇವಾಲಯಗಳು ಪ್ರವಾಹಕ್ಕೊಳಗಾಗಿವೆ,  ನದಿಯ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ನೀರು  ನಿಮಿಷಾಂಭ ದೇವಾಲಯ ಸಮೀಪಿಸಿದೆ, ಗೌತಮ ದೇವಾಲಯ ಮತ್ತು ಪಶ್ಚಿಮಾತಿ  ಗಣಪತಿ ದೇವಾಲಯಗಳದ್ದೂ ಇದೇ ಪರಿಸ್ಥಿತಿಯಾಗಿದೆ,.
ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುವ ಜಿಲ್ಲಾಡಳಿತ ಪ್ರಸಿದ್ಧ ಬೃಂದಾವನ ಗಾರ್ಡನ್ ಸೇರಿದಂಕೆ ಹಲವು ಸ್ಥಳಗಳಿಗೆ ಪ್ರವಾಸಿಗರನ್ನು ನಿರ್ಭಂದಿಸಿದೆ.
ಪ್ರವಾಸಿರ ಪ್ರಮುಖ ಆಕರ್ಷಣೆಯಾಗಿರುವ ಮ್ಯೂಸಿಕಲ್ ಫೌಂಟೈನ್ ಸ್ಥಗಿತಗೊಳಿಸಲಾಗಿದೆ,  ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗಿ ನಿಷೇಧಿಸಲಾಗಿದೆ.,ಕೆಆರ್ ಎಸ್ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ  ಜಿಲ್ಲಾಡಳಿತ ಜಲಾಶಯದ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಗೆ ನೀಡಿದೆ,
ಶ್ರೀರಂಗಪಟ್ಟಣದಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ತೆಗೆದು ಕೊಂಡಿದ್ದು, ನದಿ ದಂಡೆಯಲ್ಲಿರುವ ಹಲವು ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ, ಯಾವುದೇ ಹಾನಿ ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದಾರೆ,. ಶ್ರೀರಂಗಪಟ್ಟಣದ ವೆಸ್ಲಿ ಸೇತುವೆ ಮೇಲೆ ನಿಂತು ಜನ ಹಾಗೂ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ  ನಗರದ ಫೋಟೋ ಕ್ಲಿಕ್ಕಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com