ಬೆಂಗಳೂರು : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮುಖ್ಯಸ್ಥರೇ ಇಲ್ಲ, ದೂರುಗಳ ಮಹಾಪೂರ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಕೃಪಾ ಅಳ್ವಾ ಅವರ ಅಧಿಕಾರವಧಿ ಜೂನ್ 30 ರಂದೇ ಕೊನೆಗೊಂಡಿದ್ದು, ಅಲ್ಲಿಂದ ಈವರೆಗೂ ಯಾವುದೇ ಮುಖ್ಯಸ್ಥರ ಆಯ್ಕೆ ಆಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಕೃಪಾ ಅಳ್ವಾ ಅವರ ಅಧಿಕಾರವಧಿ ಜೂನ್ 30 ರಂದೇ ಕೊನೆಗೊಂಡಿದ್ದು, ಅಲ್ಲಿಂದ ಈವರೆಗೂ ಯಾವುದೇ ಮುಖ್ಯಸ್ಥರ ಆಯ್ಕೆ ಆಗಿಲ್ಲ.

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಆಯೋಗದ ಸಿಬ್ಬಂದಿ , ಪ್ರತಿನಿತ್ಯ 10 ರಿಂದ 15 ದೂರುಗಳ ಬರುತ್ತಿವೆ. ಆದರೆ, ಮುಖ್ಯಸ್ಥರಿಲ್ಲದೆ ಯಾವುದೇ ಆದೇಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಆರ್ ಟಿಐ ಅಡಿಯಲ್ಲಿ ಪ್ರವೇಶ ನಿರಾಕರಣೆ, ಪ್ರವೇಶ ಶುಲ್ಕ ಸಂಬಂಧಿಸಿದ ದೂರುಗಳೇ ಹೆಚ್ಚಾಗಿವೆ ಬರುತ್ತಿವೆ.  ಆದಾಗ್ಯೂ, ಸಮಿತಿಯಲ್ಲಿನ ಸದಸ್ಯರೊಬ್ಬರನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಆದರೆ, ಈ ಸಂಬಂಧದ ಅಧಿಕೃತ ಆದೇಶ ಹೊರಬಿದಿಲ್ಲ. ಪರಿಣಾಮವಾಗಿ ಹಂಗಾಮಿ ಮುಖ್ಯಸ್ಥರಾಗಲೀ ಅಥವಾ ಬೇರೆ ಯಾರಾಗಲೀ ದೂರುಗಳ ವಿಚಾರಣೆ ನಡೆಸಿ ಆದೇಶ ನೀಡಲು ಸಾಧ್ಯವಾಗುತ್ತಿಲ್ಲ.

ಸಮಿತಿಯ ಸದಸ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ,  ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು  ಬಗೆಹರಿಸಲು ಆಯೋಗ ಪ್ರಾಮುಖ್ಯತೆ ನೀಡುವುದರಿಂದ ಶೀಘ್ರದಲ್ಲಿಯೇ ಆಯೋಗದ ಮುಖ್ಯಸ್ಥರನ್ನು ಸರ್ಕಾರ ನೇಮಕಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಆಯೋಗದ ಅಧ್ಯಕ್ಷರನ್ನು ಶೀಘ್ರದಲ್ಲಿಯೇ ನೇಮಿಸುವಂತೆ ಅಲ್ಲಿಯವರೆಗೂ ಹಂಗಾಮಿ ಮುಖ್ಯಸ್ಥರಿಗೆ ಅಧಿಕಾರ ನೀಡುವಂತೆ  ಮನವಿ ಸಲ್ಲಿಸಲು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಲು ಆಯೋಗದ ಸದಸ್ಯರು  ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com