ಬೌರಿಂಗ್ ಲಾಕರ್ ನಲ್ಲಿ ಅಕ್ರಮ ನಗದು: ಬೆಂಗಳೂರು ಕ್ಲಬ್ ಗಳಿಂದ ಲಾಕರ್ ಬಳಕೆಗೆ ಕಠಿಣ ನಿಯಮ?

ಬೌರಿಂಗ್ ಕ್ಲಬ್ ಸದಸ್ಯರ ಲಾಕರ್ ಗಳಲ್ಲಿ ನೂರಾರು ಕೋಟಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಬ್ ಗಳ ಲಾಕರ್ ದುರ್ಬಳಕೆಯನ್ನು ನಿಯಂತ್ರಿಸಲು ಲಾಕರ್ ಬಳಕೆ ನಿಯಮಾವಳಿಗಳಲ್ಲಿ ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಬೌರಿಂಗ್ ಕ್ಲಬ್ ಸದಸ್ಯರ ಲಾಕರ್ ಗಳಲ್ಲಿ ನೂರಾರು ಕೋಟಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಬ್ ಗಳ ಲಾಕರ್ ದುರ್ಬಳಕೆಯನ್ನು ನಿಯಂತ್ರಿಸಲು ಲಾಕರ್ ಬಳಕೆ ನಿಯಮಾವಳಿಗಳಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ.
ನಗರದ ಹಲವು ಲಾಕರ್ ಕ್ಲಬ್ ಗಳು ರಕ್ಷಣೆಗಾಗಿ ತನ್ನದೇ ವ್ಯವಸ್ಥೆ ಹೊಂದಿದ್ದರೂ ಸಹ ಈ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲು ಅವರು ಮುಂದಾಗಿದ್ದಾರೆ.
1993 ರಿಂದ ಬೌರಿಂಗ್ ಕ್ಲಬ್ ಸದಸ್ಯರಾಗಿದ್ದ  ಅವಿನಾಶ್ ಅಮರ್ ಲಾಲ್ ಕುಕ್ರೇಜಾ  ಅವರ ಮೂರು ಲಾಕರ್ ಗಳಲ್ಲಿ ಅಕ್ರಮ ಆಸ್ತಿ, ನಗದು ಪತ್ತೆಯಾದ ಘಟನೆ ಶನಿವಾರ ಮಾದ್ಯಮಗಳಲ್ಲಿ ವರದಿಯಾಗಿತ್ತು. 800 ಕೋಟಿ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು, ಹಲವಾರು ಕೋಟಿ ಮೌಲ್ಯದ ನಗದು ಮತ್ತು ಆಭರಣಗಳು ಮತ್ತು ಎರಡು ದುಬಾರಿ ಗಡಿಯಾರಗಳನ್ನು ಲಾಕರ್ ನಿಂದ ವಶಕ್ಕೆ ಪಡೆಯಲಾಗಿತ್ತು.
ಕ್ಲಬ್ ಗಳ ನಿಯಮಾವಳಿಯಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ ಎಂದು ಸೆಂಚುರಿ ಕ್ಲಬ್ನ ಅಧ್ಯಕ್ಷ ಅರ್ಜುನ್ ಅನೇಕರ್ ಹೇಳಿದ್ದಾರೆ.
"ನಾವು ಶೀಘ್ರವಾಗಿ ಸಭೆ ನಡೆಸಲಿದ್ದೇವೆ. ಹಾಗೆಯೇ ಕ್ಲಬ್ ನ ಲಾಕರ್ ಹೊಂದಿರುವ ಎಲ್ಲಾ ಸದಸ್ಯರಿಂದ ನಕಲಿ ಕೀಯನ್ನು ಪಡೆದುಕೊಳ್ಳಲಾಗುತ್ತದೆ.ಇಂದಿನವರೆಗೆ ಲಾಕರ್ ಮಾಲೀಕರು ಮಾತ್ರ ಆ ಲಾಕರ್ ನ ಕೀ ಹೊಂದಿರುತ್ತಿದ್ದರು. ಮುಂದಿನ ದಿನದಲ್ಲಿ ಸಮಿತಿಯು ಸೂಕ್ತ ನಿರ್ಧಾರಕ್ಕೆ ಬರಲಿದೆ. ಆದರೆ ನಾನು ಭಾವಿಸುವಂತೆ ಸಮಿತಿ ಈ ನಿರ್ಧಾರ ಕೈಗೊಳ್ಳುತ್ತದೆ" ಅವರು ಹೇಳಿದ್ದಾರೆ.
ಬೆಂಗಳೂರಿನ ಟರ್ಫ್ ಕ್ಲಬ್ ಸಿಇಒ ಹರಿಮೋಹನ್ ನಾಯ್ಡು  ಸಹ ಸಮಿತಿಯ ಸಭೆಯಲ್ಲಿ ಈ ಕುರಿತಂತೆ ತೀರ್ಮಾನ ಕೈಗೊಳ್ಳಬೇಕೆಂದು ಹೇಳಿದ್ದಾರೆ. ಲಾಕರ್ ನಿಯಮಾವಳಿಯಲ್ಲಿ ಬದಲಾವಣೆ ತರುವುದಕ್ಕೆ ನಮಗೆ ಆಸಕ್ತಿ ಇದೆ.ನಾಉ ಇನ್ನು ಮುಂದೆ ಕೇವಲ ಜಾಕಿಗಳಿಗೆ ಮಾತ್ರ ಲಾಕರ್ ಸೌಲಭ್ಯ ನೀಡುತ್ತೇವೆ. ಸದಸ್ಯರಿಗೆ ಈ ಸೌಲಭ್ಯವಿರುವುದಿಲ್ಲ. ಜಾಕಿಗಳು ಂಆತ್ರವೇ ಲಾಕರ್ ಕೀ ಹೊಂದಿರಲಿದ್ದಾರೆ ಎಂದು ಅವರು ನುಡಿದರು.
ಬಿಡದಿ ಸಮೀಪದ ಈಗಲ್ಟನ್ ಗಾಲ್ಫ್ ರೆಸಾರ್ಟ್ ನಂತಹಾ ಕೆಲ ಕ್ಲಬ್ ಗಳು ತಾವು ಇದಾಗಲೇ ರೂಪಿಸಿದ ನಿಯಮಾವಳಿಗಳು ಲಾಕರ್ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಆಗದಂತೆ ಕಠಿಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಕ್ಲಬ್ ನ ಜನರಲ್ ಮ್ಯಾನೇಜರ್ ಮ್ಯಾಥ್ಯೂ ಜ"ಿಪಿ ಹೇಳುವಂತೆ " ನಮ್ಮಲ್ಲಿ ಎರಡು ಬಗೆಯ ಲಾಕರ್ ಗಳಿದೆ. ಮೊದಲನೆಯದು ಸುರಕ್ಷತಾ ಲಾಕರ್ ಗಳು ಇವುಗಳನ್ನು ಕೊಠಡಿಯ ಸದಸ್ಯರು ಮಾತ್ರವೇ ಬಳಸಬಹುದು.ಈ ಸದಸ್ಯರಿಂದ ನಾವು ಪ್ರಮಾಣ ತೆಗೆದುಕೊಂಡಿರುತ್ತೇವೆ. ಲಾಕರ್ ಗಳನ್ನು ಸುರಕ್ಷಿತವಾಗಿ ಬಳಸಬೇಕು ಹಾಗೂ ಯಾವುದೇ ಕಾನೂನು ಬಾಹಿರ ವಸ್ತುಗಳನ್ನು ಶೇಖರಿಸಬಾರದು  ಎಂದು ನಾವು ಅವರಿಂದ ಭಾಷೆ ತೆಗೆದುಕೊಳ್ಳುತ್ತೇವೆ.. ಇನ್ನು ಈ ಲಾಕರ್ ಗಳ ಕೀಲಿಗಲು ಸಹ ಕ್ಲಬ್ ನಲ್ಲಿದ್ದು ಕ್ಲಬ್ ಮಾಲೀಕರು ಮಾತ್ರ ಇದನ್ನು ತೆರೆಯಬಹುದಾಗಿದೆ.
ಎರಡನೇ ಶೈಲಿಯ ಲಾಕರ್ ಗಳು ವಾಶ್ ರೂಂ ನಲ್ಲಿದೆ. ಬೌರಿಂಗ್ ಘಟನೆ ನಮಗೆ ಈ ಬಗೆಯ ಲಾಕರ್ ಗಳ ಕುರಿತಂತೆ ಚಿಂತಿಸುವಂತೆ ಮಾಡಿತ್ತು. ಆದರೆ ನಮ್ಮಲ್ಲಿನ ನಿಯಮಾವಳಿಗಳು ಉತ್ತಮವಾಗಿದೆ. ಇದನ್ನು ಬದಲಿಸಬೇಕಾಗಿಲ್ಲ ಎಂದು ಮ್ಯಾಥ್ಯೂ ಹೇಳಿದ್ದಾರೆ.
ಕರ್ನಾಟಕದ ಗಾಲ್ಫ್ ಅಸೋಸಿಯೇಷನ್ ​​ಅಧ್ಯಕ್ಷರಾದ ಹರೀಶ್ ಶೆಟ್ಟಿ ಮಾತನಾಡ್ "ಕ್ಲಬ್ ಕೇವಲ ಮರದ ಲಾಕರ್ ಗಳನ್ನು ನೀಡಿದೆ.ಆದ್ದರಿಂದ ಯಾರೊಬ್ಬರೂ ಬೆಲೆಬಾಳುವ ವಸ್ತುಗಳನ್ನು ಇಲ್ಲಿಡಲಾರರು ಇಷ್ಟಾಗಿಯೂ ನಾವು ಮುಂದೆ ಹೆಚ್ಚುವರಿ ಭದ್ರತಾ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.
ಇಂದಿರಾನಗರ್ ಕ್ಲಬ್ ಈಗಾಗಲೇ ಲಾಕರ್ ದುರ್ಬಳಕೆ ತಡೆಯಲು ಇದಾಗಲೇ ವ್ಯವಸ್ಥೆ ಹೊಂದಿದ್ದು ಕ್ಲಬ್ ಸದಸ್ಯರೆಲ್ಲರ ಲಾಕರ್ ಗಳ ನಕಲಿ ಕೀಗಳು ಇರುವುದಾಗಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com