ಎಲಿವೇಟೆಡ್ ಕಾರಿಡಾರ್ ಯೋಜನೆ: ನಾಗರಿಕ ವೇದಿಕೆಯಿಂದ ಸಾಮಾಜಿಕ ಮಾಧ್ಯಮ ಅಭಿಯಾನ

ಎಲೆವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಸಭೆಗೆ ತಮ್ಮನ್ನು ಆಹ್ವಾನಿಸದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಭಾನುವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮ ಅಭಿಯಾನ ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಎಲೆವೇಟೆಡ್  ಕಾರಿಡಾರ್ ಯೋಜನೆಯಲ್ಲಿ ಸಭೆಗೆ ತಮ್ಮನ್ನು ಆಹ್ವಾನಿಸದ  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ  ಭಾನುವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸಿ ಪ್ರತಿಭಟಿಸಲು ನಾಗರಿಕೆ ವೇದಿಕೆಯು ತೀರ್ಮಾನಿಸಿದೆ.
ಸೋಮವಾರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬೆಂಗಳೂರಿನ ನಾಗರಿಕ ವೇದಿಕೆಯ  ಶ್ರೀನಿವಾಸ್ ಅಲವಳ್ಳಿ ಭಾನುವಾರ 3ರಿಂದ 4 ಗಂಟೆ ನಡುವೆ ನಡೆಯುವ  ಸಾಮಾಜಿಕ ಮಾಧ್ಯಮ ಅಭಿಯಾನದೊಂದಿಗೆ ಸೇರಲು ಫೇಸ್ ಬುಕ್ ಪೋಸ್ಟ್ ಮೂಲಕ ನಾಗರಿಕರಿಗೆ ಮನವಿ ಮಾಡಿದ್ದಾರೆ. ಈ ಅಭಿಯಾನವು ಮುಖ್ಯಮ್ಂತ್ರಿಗಳ ನಿಲುವಿನ ವಿರುದ್ಧ ಹೊಸ ರೂಪದ ಪ್ರತಿಭಟನೆ ನಡೆಸುವುದಕ್ಕಾಗಿ ಸಿದ್ದವಾಗಿದೆ.
"ನಾವು ಸಭೆಗೆ ಆಹ್ವಾನಿತರಾಗಿಲ್ಲ, ಆದರೆ ನಾವು ಏನನ್ನು ಬಯಸಿದ್ದೇವೆ ಎನ್ನುವುದು ಮುಖ್ಯಮಂತ್ರಿಗೆ ತಿಳಿಯಬೇಕು. ಸಾರ್ವಜನಿಕ ಸಮಾಲೋಚನೆ ಮಾಡದೆಯೇ ಸರ್ಕಾರವು ತಮ್ಮದೇ ಆದ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಿದೆ. ಇದನ್ನು ಪ್ರತಿಭಟಿಸುವುದಕ್ಕಾಗಿ ನಾವು ನವೀನ ವಿಧಾನವನು ಅನುಸರಿಸಲು ಮುಂದಾಗಿದ್ದೇವೆ.ಇಂದು (ಶನಿವಾರದಂದು) ನಾವು ಆ ಕೆಲಸ ಮಾಡಲಿದ್ದೇವೆ." ಅಲವಳ್ಳಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ರಾಜ್ಯದ ಸಮಸ್ಯೆಗಳ ಬಗೆಗೆ ಅರಿವು ಪಡೆಯಬೇಕು. ಯೋಜನೆಯ ಬಗ್ಗೆ ನಾಗರಿಕರ ದೃಷ್ಟಿಕೋನವನ್ನು ಅವರು ತಿಳಿದಿಲ್ಲ. ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com