ರಾಯಚೂರು: ಆಯೋಗದ ಸಮೀಕ್ಷೆಗೆ ಸ್ವತಂತ್ರ ಸಂಸ್ಥೆ ಭಾಗಿ

ಜಿಲ್ಲಾ ಮಟ್ಟದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ರೂಪಾಂತರದಡಿಯಲ್ಲಿ ನೀತಿ ...
ನೀತಿ ಆಯೋಗ ಕಚೇರಿ
ನೀತಿ ಆಯೋಗ ಕಚೇರಿ

ರಾಯಚೂರು: ಜಿಲ್ಲಾ ಮಟ್ಟದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ರೂಪಾಂತರದಡಿಯಲ್ಲಿ ನೀತಿ ಆಯೋಗಕ್ಕೆ ಸಹಾಯ ಮಾಡಲು ಅಂಕಿಅಂಶಗಳ ತಯಾರಿಗೆ ಸ್ವತಂತ್ರ ಸಂಘಟನೆ ಸಮೀಕ್ಷೆ ನಡೆಸಲಿದೆ.

ದೇಶಾದ್ಯಂತ 117 ಹಿಂದುಳಿದ ಜಿಲ್ಲೆಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆ ಕೂಡ ಒಂದಾಗಿದೆ.

ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲ, ಹಣಕಾಸು ಸೇರ್ಪಡೆ, ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಸರ್ಕಾರಿ ಸಂಸ್ಥೆಗಳಲ್ಲದೆ ಸ್ವತಂತ್ರ ಸಂಸ್ಥೆಗಳು ಕೂಡ ದಾಖಲೆಗಳನ್ನು ಸಂಗ್ರಹಿಸಲಿವೆ. ಕಳೆದ ತಿಂಗಳು ಬಿಡುಗಡೆಯಾದ ದಾಖಲೆಗಳ ಪ್ರಕಾರ, ಆರೋಗ್ಯ ಮತ್ತು ಪೌಷ್ಟಿಕಾಂಶಗಳ ಸುಧಾರಣೆಯಲ್ಲಿ ರಾಯಚೂರು ಜಿಲ್ಲೆ ಉನ್ನತ ಸ್ಥಾನದಲ್ಲಿದ್ದು ಮೂಲಭೂತ ಸೌಕರ್ಯಗಳಲ್ಲಿ ಜಿಲ್ಲೆಯದ್ದು ಅತಿ ಕಳಪೆ ಸಾಧನೆಯಾಗಿದೆ.

ಪಕ್ಷಪಾತರಹಿತವಾದ ಮತ್ತು ಪಾರದರ್ಶಕ ಅಂಕಿಅಂಶಗಳನ್ನು ಸಂಗ್ರಹಿಸಬೇಕಾಗಿರುವುದರಿಂದ ನೀತಿ ಆಯೋಗ ಸ್ವತಂತ್ರ ಸಂಸ್ಥೆಯ ಹೆಸರನ್ನು ಗುಪ್ತವಾಗಿಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com