ಬಳ್ಳಾರಿ: ರಾಜ್ಯದ ಅತ್ಯುತ್ತಮ ಆಸ್ಪತ್ರೆಯಲ್ಲಿ ಶೌಚಾಲಯ, ನೀರಿನ ಸೌಲಭ್ಯವೇ ಇಲ್ಲ!

ಮೂರು ತಿಂಗಳ ಹಿಂದಷ್ಟೇ ತನ್ನ ಎಲ್ಲಾ ಸೇವೆಗಳಿಗಾಗಿ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಪಡೆದಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬಳ್ಳಾರಿ: ಮೂರು ತಿಂಗಳ ಹಿಂದಷ್ಟೇ ತನ್ನ ಎಲ್ಲಾ ಸೇವೆಗಳಿಗಾಗಿ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಪಡೆದಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ರೋಗಿಗಳಿಗೆ ಶೌಚಾಲಯ ಮತ್ತು ನೀರಿನ ಸೌಲಭ್ಯವೇ ಇಲ್ಲ. 
ಆಸ್ಪತ್ರೆಯ ಸುತ್ತಮುತ್ತ ನೀರಿನ ಯಾವುದೇ ಪ್ರಮುಖ ಮೂಲಗಳು ಇಲ್ಲ. ಹೀಗಾಗಿ ಆಸ್ಪತ್ರೆ ತೀವ್ರ ನೀರಿನ ಕೊರತೆ ಎದುರಿಸುತ್ತಿದೆ. ಹೀಗಾಗಿ ಕಳೆದ ಮೂರು ತಿಂಗಳಿಂದ ಸಿಬ್ಬಂದಿ ಮತ್ತು ರೋಗಿಗಳು ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳಿಗೆ ಆಸ್ಪತ್ರೆಯಲ್ಲಿ ಶೌಚಾಲಯ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಹೀಗಾಗಿ ಆಸ್ಪತ್ರೆಯ ಕಾರ್ನರ್ ಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. 
ಆಸ್ಪತ್ರೆಯಲ್ಲಿ ಶೌಚಾಲಯ ಎಲ್ಲಿದೆ ಅಂತ ಗೊತ್ತಿಲ್ಲ. ನಾವು ಇಂದಿರಾ ಸರ್ಕಲ್ ನಲ್ಲಿರುವ ಶೌಚಾಲಯಕ್ಕೆ ಹೋಗಿ ಬರುತ್ತೇವೆ ಎಂದು ತಮ್ಮ ಮಗಳನ್ನು ಲೇಬರ್ ವಾರ್ಡ್ ನಲ್ಲಿ ದಾಖಲಿಸಿರುವ ರಫಿಖ್ ಅವರು ಹೇಳುತ್ತಾರೆ.
ಶೌಚಾಲಯ ಎಲ್ಲಿದೆ ಎಂದು ಮತ್ತೊಬ್ಬ ರೋಗಿ ವೆಂಕಟಪತಿಯನ್ನು ಕೇಳಿದರೆ, ನಮಗೆ ಗೊತ್ತಿಲ್ಲ ಹೊರಗಡೆ ಹೋಗಿ ಎಂದು ಗೇಟ್ ತೋರಿಸುತ್ತಾರೆ.
ಇನ್ನು ಈ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದರೆ, ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗಾಗಿ ನಾಲ್ಕು ಶೌಚಾಲಯಗಳಿವೆ. ಆದರೆ ನವೀಕರಣಕ್ಕಾಗಿ ಅವುಗಳನ್ನು ಬಂದ್ ಮಾಡಲಾಗಿದೆ ಎನ್ನುತ್ತಾರೆ.
ಆದಾಗ್ಯೂ, ನೆಲಮಹಡಿಯಲ್ಲಿ ಒಂದು ಶೌಚಾಲಯ ಇದ್ದು, ಅದನ್ನು ಬಳಸಲು ಲೇಬರ್ ವಾರ್ಡ್ ರೋಗಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿಬ್ಬಂದಿಗಾಗಿ ಮತ್ತೊಂದು ಶೌಚಾಲಯವಿದ್ದು, ಅದನ್ನು ಲಾಕ್ ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಮತ್ತು ಶೌಚಾಲಯ ಸಮಸ್ಯೆ ಇರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ ಕಿವಿ ರಾಜೇಂದ್ರ ಅವರು, ಆ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com