ಶೂನ್ಯ ಎನ್ ಪಿಎ ಸಾಧನೆ ಮಾಡಿರುವ ಮಂಗಳೂರಿನ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ!

ನಗರದ ಕೇಂದ್ರ ಭಾಗದಲ್ಲಿರುವ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಶೂನ್ಯ ಅನುತ್ಪಾದಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಶೂನ್ಯ ಅನುತ್ಪಾದಕ ಆಸ್ತಿ(ಎನ್ ಪಿಎ) ಮೌಲ್ಯವನ್ನು ಹೊಂದಿದೆ.

ಮಂಗಳೂರಿನ ಅಳಕೆಯ ಹಮೀದ್ ಕಾಂಪ್ಲೆಕ್ಸ್ ನಲ್ಲಿರುವ ಬ್ಯಾಂಕಿನ ಶಾಖೆ ಆರಂಭವಾಗಿ 30 ವರ್ಷಗಳಾಗಿದ್ದು ಇಲ್ಲಿ 4 ಸಾವಿರ ಖಾತೆಗಳಿವೆ. ಅವುಗಳಲ್ಲಿ 400 ಸಾಲ ಪಡೆದ ಖಾತೆದಾರರದ್ದಾಗಿದೆ ಎಂದು ಇಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ 31ರಂದು ನಿವೃತ್ತಿ ಹೊಂದಿದ ಎಸ್ ಸುಬ್ರಹ್ಮಣ್ಯ ನಾಯಕ್ ಹೇಳುತ್ತಾರೆ.

ಕಳೆದ 5 ವರ್ಷಗಳಿಂದ ಸತತವಾಗಿ ಯಾವುದೇ ಸಾಲ ಹಿಂಪಡೆಯಲು ಬಾಕಿಯಾಗದೆ ಬ್ಯಾಂಕಿನ ಅನುತ್ಪಾದಕ ಆಸ್ತಿಗಳ ಮೌಲ್ಯ ತೋರಿಸುತ್ತಿರುವುದು ಪ್ರತಿಯೊಬ್ಬರಲ್ಲಿಯೂ ಅಚ್ಚರಿಯನ್ನುಂಟುಮಾಡಿದೆ. ಸಾಲ ತೆಗೆದುಕೊಂಡವರು 90 ದಿನಗಳಿಗಿಂತ ಹೆಚ್ಚು ಸಮಯ ಸಾಲವನ್ನು ತೀರಿಸದಿದ್ದರೆ ಬ್ಯಾಂಕು ಅಧಿಕಾರಿಗಳು ಯಾವುದೇ ಬೆದರಿಕೆ ಒಡ್ಡಿರುವ ಪ್ರಕರಣಗಳು ಕೂಡ ನಡೆದಿಲ್ಲ. ಬ್ಯಾಂಕಿನ ಅಧಿಕಾರಿಗಳಿಂದ ನಮಗೆ ತೊಂದರೆಯಾಗಿದೆ ಎಂದು ಯಾವ ಗ್ರಾಹಕರೂ ಆರೋಪಿಸಿದ್ದಿಲ್ಲ ಎನ್ನುತ್ತಾರೆ ಸುಬ್ರಹ್ಮಣ್ಯ ನಾಯಕ್.

20 ವರ್ಷಗಳ ಹಿಂದೆ ವ್ಯಾಪಾರ ಆರಂಭಿಸಲು ಗೊಡ್ವಿನ್ ಮನೋಹರ್ ಎಂಬುವವರು ಬ್ಯಾಂಕಿನಲ್ಲಿ ನಾಯಕ್ ಅವರನ್ನು ಭೇಟಿ ಮಾಡಿದ್ದರಂತೆ. ಆರಂಭದಲ್ಲಿ ನನ್ನ ಪೋಷಕರು ಬ್ಯುಸೆನೆಸ್ ಎಲ್ಲಾ ನಿನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಬ್ಯಾಂಕಿಗೆ ಹೋದಾಗ ನಾಯಕ್ ಅವರು ನನ್ನ ಉದ್ಯಮ ಆರಂಭದ ಆಲೋಚನೆ ಕೇಳಿ 50,000 ರೂಪಾಯಿ ಸಾಲ ಮಂಜೂರು ಮಾಡಿದರು ಎನ್ನುತ್ತಾರೆ.

ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಿಬ್ಬಂದಿಯ ಆಡಳಿತ ಕ್ಷಮತೆಯಿಂದ ಕಳೆದ 5 ವರ್ಷಗಳಿಂದ ಬ್ಯಾಂಕ್ ಶೂನ್ಯ ಅನುತ್ಪಾದಕ ಆಸ್ತಿ ಸಾಧನೆ ಮಾಡಿದೆ ಎನ್ನುತ್ತಾರೆ.

ಒಂದು ವೇಳೆ ಏನಾದರೂ ಕಷ್ಟ ಬಂದು ಗ್ರಾಹಕರಿಗೆ ಸಾಲ ನೀಡಲು ಅಸಾಧ್ಯವಾದರೆ ನಾಯಕ್ ಅವರೇ ಹಲವು ಸಂದರ್ಭಗಳಲ್ಲಿ ಅವರ ಪರವಾಗಿ ಸಾಲ ಕಟ್ಟಿದ್ದ ಉದಾಹರಣೆಯಿದೆ. ಲಕ್ಷಗಟ್ಟಲೆ ಹಣವನ್ನು ಗ್ರಾಹಕರಿಗೆ ಒಂದು ಬಾರಿಗೆ ನೀಡಿದ್ದಿದೆ, ಆದರೆ ಅವರೆಂದೂ ನಮ್ಮ ನಂಬಿಕೆಗೆ ದ್ರೋಹ ಮಾಡಿಲ್ಲ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com