ಕೋಲಾರದ ಟೊಮೆಟೋ ಬೆಳೆಗಾರ ಹರೀಶ್ ಅವರು ಮಾತನಾಡಿ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್ಗಢ ರಾಜ್ಯಗಳು ಅತ್ಯಂತ ಹೆಚ್ಚಿನ ತಾಪಮಾನವನ್ನು ಹೊಂದಿರುವ ರಾಜ್ಯಗಳಾಗಿದ್ದು, ಈ ರಾಜ್ಯಗಳಲ್ಲಿ ಟೊಮೆಟೋ ಬೆಳೆಯುವುದು ಕಷ್ಟಕರವಾಗಿರುತ್ತದೆ. ಹೀಗಾಗಿ ಈ ರಾಜ್ಯಗಳು ಕರ್ನಾಟಕದಿಂದಲೇ ಟೊಮೆಟೋಗಳನ್ನು ಖರೀದಿ ಮಾಡುತ್ತಿತ್ತು. ಆದರೆ, ಪ್ರಸಕ್ತ ವರ್ಷ ಈ ರಾಜ್ಯಗಳ ಉಷ್ಣಾಂಶ 38 ಡಿಗ್ರಿಗಿಂತಲೂ ಹೆಚ್ಚು ಹೋಗಿಲ್ಲ. ಹೀಗಾಗಿ ತಮ್ಮ ತಮ್ಮ ರಾಜ್ಯಗಳಲ್ಲಿಯೇ ಟೊಮೆಟೋ ಬೆಳೆಗಳನ್ನು ಬೆಳೆದುಕೊಳ್ಳುತ್ತಿರುವುದಿಂದ ರಾಜ್ಯದ ಟೊಮೆಟೋಗಳಿಗೆ ಇರುತ್ತಿದ್ದ ಬೇಡಿಕೆಗಳು ಕಡಿಮೆಯಾಗಿವೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ರೈತರು ತಮ್ಮ ಬೆಳೆಗಳಿಗೆ ಹಾಕಿದ್ದ ಹಣ ಕೂಡ ಬರುತ್ತಿಲ್ಲ. ಇಲ್ಲಿನ ಟೊಮೆಟೋ ಬೆಳೆಗಾರರು ಒಂದು ಎಕರೆ ಬೆಳೆಗೆ ರೂ.50,000 ದಿಂದ 70,000ದವರೆಗೂ ಖರ್ಚು ಮಾಡಿದ್ದಾರೆಂದು ಹೇಳಿದ್ದಾರೆ.