ಬೆಂಗಳೂರಿನ ಐಟಿ ಪಾರ್ಕ್ ಗೆ ಬಾಂಬ್‌ ಬೆದರಿಕೆ ಕರೆ, ಆತಂಕ ಸೃಷ್ಟಿ

ಬೆಂಗಳೂರಿನ ಬೆಳಂದೂರು ಸಮೀಪದ ದೇವರಬೀಸನಹಳ್ಳಿಯ ಔಟರ್ ರಿಂಗ್ ರೋಡ್ ನಲ್ಲಿರುವ ...
ಐಟಿ ಕಂಪನಿ
ಐಟಿ ಕಂಪನಿ
ಬೆಂಗಳೂರು: ಬೆಂಗಳೂರಿನ ಬೆಳಂದೂರು ಸಮೀಪದ ದೇವರಬೀಸನಹಳ್ಳಿಯ ಔಟರ್ ರಿಂಗ್ ರೋಡ್ ನಲ್ಲಿರುವ ಎಂಬೆಸ್ಸಿ ಟೆಕ್‌ ವಿಲೇಜ್‌ನಲ್ಲಿ ಸಾಫ್ಟ್ ವೇರ್‌ ಕಂಪನಿ ಶುಕ್ರವಾರ ಬಾಂಬ್‌ ಬೆದರಿಕೆ ಕರೆ ಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 
ಎಂಬೆಸ್ಸಿ ಟೆಕ್ ವಿಲೇಜ್ ನಲ್ಲಿರುವ ಸಿಸ್ಕೋ ಸಾಫ್ಟ್ ವೇರ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೂಡಲೇ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ 7 ಸಾವಿರ ಸಿಬ್ಬಂದಿಯನ್ನು ಕಟ್ಟದಿಂದ ಹೊರಗೆ ಕಳುಹಿಸಲಾಯಿತು.
ವೈಟ್ ಫೀಲ್ಡ್ ಉಪ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹಲವು ಗಂಟೆಗಳ ತಪಾಸಣೆಯ ನಂತರ ಇದೊಂದು ಹುಸಿ ಕರೆ ಎಂದು ತಿಳಿದು ಬಂದಿದೆ.
ಸೈಬರ್ ಕ್ರೈಂ ಪೊಲೀಸರು ಈಗ ತನಿಖೆ ಆರಂಭಿಸಿದ್ದು, ಕರೆ ಮಾಡಿದ್ದ ವ್ಯಕ್ತಿಯ ಪತ್ತೆಗೆ ಜಾಲ ಬೀಸಿದ್ದಾರೆ
ದುಷ್ಕರ್ಮಿಯೊಬ್ಬ ಇಂಟರ್ ನೆಟ್‌ ಕರೆ ಮಾಡಿ, ಹತ್ತು ನಿಮಿಷಗಳಲ್ಲಿ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಆತ ಹಿಂದಿಯಲ್ಲಿ ಮಾತನಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com