ಈ ಕುರಿತಂತೆ ಮಾತನಾಡಿದ ತೇಜಸ್ ತಂದೆ ಕಾಂತರಾಜು "ತೇಜಸ್ ಗೆ ಹಳೆ ಸಂಸ್ಥೆಯಲ್ಲಿ 12,000 ವೇತನ ಸಿಗುತ್ತಿತ್ತು. ಅವನು 6,000 ರೂ ನಮಗೆ ಕಳಿಸುತ್ತಿದ್ದ. ಈಗ ಎರಡು ವಾರಗಳ ಹಿಂದೆ ಅವನಿಗೆ ಹೊಸ ಕೆಲಸ ಸಿಕ್ಕಿತ್ತು. ಅಲಿ 17,000 ವೇತನದ ಭರವಸೆ ನೀಡಿದ್ದರು. ಆದರೆ ಹಳೆ ಸಂಸ್ಥೆಯ ಮಾಲೀಕರು ಮೋಹನ್ ರಾಜ್ ತೇಜಸ್ ಗೆ ರಿಲೀವಿಂಗ್ ಲೆಟರ್ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಹೊಸ ಸಂಸ್ಥೆಗೆ ಈ ಮೇಲೆ ಕಳಿಸಿ ತೇಜಸ್ ನನ್ನು ಸೇರಿಸಿಕೊಳ್ಳದಂತೆ, ಅವನ ವ್ಯಕ್ತಿತ್ವ ಸರಿ ಇಲ್ಲ ಎಂಬಂತೆಯೂ ಸುಳ್ಳು ಆರೋಪ ಮಾಡಿದ್ದಾರೆ. ಗುರುವಾರ ಸಂಜೆಯ ವೇಳೆ ತೇಜಸ್ ತನ್ನ ತಾಯಿ ಜತೆ ಮಾತನಾಡಿದ್ದು ಮೋಹನ್ ಮತ್ತು ಅವನ ಇಬ್ಬರು ಪುತ್ರರು ಅವನಿಗೆ ಹೇಗೆ ಕಿರುಕುಳ ನೀಡದರೆನ್ನುವುದನ್ನು ವಿವರಿಸಿದ್ದ. ಮೋಹನ್ ಗೆ ಕಠಿಣ ಶಿಕ್ಷೆಯಾಗಬೇಕು:" ಎಂದಿದ್ದಾರೆ.