ತಂತ್ರಜ್ಞಾನ ವಲಯದ ಉದ್ಯೋಗಾವಕಾಶ, ಬೆಂಗಳೂರೇ ನಂಬರ್ ಒನ್: ವರದಿ

ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಬಯಸುವವರಿಗೆ ಬೆಂಗಳೂರು ಅತ್ಯಂತ ಹೆಚ್ಚು ಅವಕಾಶ ನಿಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಬಯಸುವವರಿಗೆ ಬೆಂಗಳೂರು ಅತ್ಯಂತ ಹೆಚ್ಚು ಅವಕಾಶ ನಿಡುತ್ತಿದೆ. ದೆಹಲಿ- ಎನ್ ಸಿಆರ್ ಮತ್ತು ಪುಣೆ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳ ಪೈಕಿ ಶೇ. 22ರಷ್ಟು ಬೆಂಗಳೂರಿನಲ್ಲಿ ಭರ್ತಿಯಾಗುತ್ತಿದೆ. ಉಳಿದಂತೆ ದೆಹಲಿ-ಎನ್ ಸಿಆರ್ ಶೇ. 11 ಹಾಗೂ ಪುಣೆ ಶೇ.10ರಷ್ಟು ಉದ್ಯೋಗ ಕಲ್ಪಿಸುತ್ತಿದೆ ಎಂದು ಪ್ರಮುಖ ಆನ್ ಲೈನ್ ಜಾಬ್ ಸೈಟ್ ’ಇಂಡೀಡ್’ ವರದಿ ಮಾಡಿದೆ.
"ಭಾರತದ ಸಿಲಿಕಾನ್ ವ್ಯಾಲಿ ಎನ್ನುವ ಹೆಸರನ್ನುಹೊಂದಿರುವ ಬೆಂಗಳೂರು ಈ ಹೆಸರಿಗೆ ಸೂಕ್ತವಾಗಿದೆ.ತಂತ್ರಜ್ಞಾನ ಕ್ಷೇತ್ರದ ಉದ್ಯೋಗಾವಕಾಶದ ಆಧಾರದಲ್ಲಿ ಮುಂಚೂಣಿಯಲ್ಲಿರುವ ನಗರ ಈ ಹಿಂದೆ ಸಹ ಅನೇಕ ಉದ್ಯಮಗಳ ನೆಲೆಯಾಗಿತ್ತು." ವರದಿಯಲ್ಲಿ ಹೇಳಲಾಗಿದೆ.
ಇನ್ನುಳಿದಂತೆ ದೇಶದ ಪ್ರಮುಖ ನಗರಗಳು ಹಾಗೂ ಅವುಗಳಲ್ಲಿ ತಂತ್ರಜ್ಞಾನ ವಲಯದ ಉದ್ಯೋಗಾವಕಾಶ ಪ್ರಮಾಣ ಈ ರೀತಿಯಾಗಿದೆ- ಹೈದರಾಬಾದ್ (9 ಶೇಕಡಾ), ಮುಂಬೈ (ಶೇ 8), ಚೆನ್ನೈ (ಶೇ 7), ಮೊಹಾಲಿ (ಶೇ 4) ಮತ್ತು ಅಹಮದಾಬಾದ್ (ಶೇ.3 )
20-29 ವರ್ಷ ವಯಸ್ಸಿನವರು ಈ ವಲಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಬಯಸುತ್ತಾರೆಯಾದರೂ 55 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಉದ್ಯೋಗಿಗಳು ಸಹ  ವಿಭಾಗದಲ್ಲಿ ಗಮನಾರ್ಹ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಆದರೆ 40-49 ವಯಸ್ಸಿನವರು ವಲಯದಲ್ಲಿ ಕನಿಷ್ಠ ಆಸಕ್ತಿಯನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com