ಬೆಂಗಳೂರು: 12ನೇ ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ

ಸಾಫ್ಟ್‌ವೇರ್‌ ಎಂಜಿನೀಯರ್‌ ಒಬ್ಬರು ತಾವು ಕೆಲಸ ಮಾಡುವ ಕಂಪನಿ ಕಟ್ಟಡದ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ...
ಆತ್ಮಹತ್ಯೆಗೆ ಶರಣಾದ ಟೆಕ್ಕಿ
ಆತ್ಮಹತ್ಯೆಗೆ ಶರಣಾದ ಟೆಕ್ಕಿ
Updated on
ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನೀಯರ್‌ ಒಬ್ಬರು ತಾವು ಕೆಲಸ ಮಾಡುವ ಕಂಪನಿ ಕಟ್ಟಡದ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಐಟಿಪಿಎಲ್‌ನಲ್ಲಿ ನಡೆದಿದೆ. 
ಮಧ್ಯಪ್ರದೇಶ ಮೂಲದ ಭವೇಶ್‌ ಜೈಪಾಲ್‌ ಆತ್ಮಹತ್ಯೆ ಮಾಡಿಕೊಂಡವರು. ನ್ಯೂ ಸಿಗ್ಮಾ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಸೋಮವಾರ ಸಂಜೆ ಕೆಲಸದ ಅವಧಿ ಮುಗಿಯುವ ವೇಳೆಗೆ ಕಟ್ಟಡದ 12ನೇ ಮಹಡಿಗೆ ಲಿಫ್ಟ್‌ನಲ್ಲಿ ಹೋಗಿ ಅಲ್ಲಿಂದಲೇ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹದ್ಯೋಗಿಗಳು ಪೊಲೀಸರಿಗೆ ತಿಳಿಸಿದ್ದಾರೆ,.
ಮೇಲಿನಿಂದ ಬಿದ್ದ ಶಬ್ದ ಕೇಳಿದ ತಕ್ಷಣ ಕಾವಲು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಅಷ್ಟು ಹೊತ್ತಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು, ತಲೆಯಿಂದ ರಕ್ತಸ್ರಾವ ಆಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 23ವರ್ಷ ವಯಸ್ಸಿನ ಜೈಸ್ವಾಲ್‌ ಇನ್ನೂ ಅವಿವಾಹಿತರಾಗಿದ್ದರು ಇಂದಿರಾನಗರದಗಲ್ಲಿ ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ತಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ವೈಯುಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆತ್ಮಹತ್ಯೆಗೂ ಯಾರಿಗಾದರೂ ಸಂದೇಶ ಅಥವಾ ಇ-ಮೇಲ್‌ ಕಳುಹಿಸಿದ್ದಾರಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. 
ಜತೆಯಲ್ಲಿ ಕೆಲಸ ಮಾಡುವ ಹಲವರಿಂದ ಮತ್ತು ಕಂಪನಿ ಎಚ್‌ಆರ್‌ ಕಡೆಯಿಂದ ಒಂದಷ್ಟು ಮಾಹಿತಿ ಸಂಗ್ರಹಿಸಿದ್ದೇವೆ. ಕಳೆದ ಒಂದೂವರೆ ವರ್ಷಗಳಿಂದ ಇವರು ಬೆಂಗಳೂರಿನಲ್ಲೇ ಕೆಲಸ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಪ್ರಕರಣ ದಾಖಲಿಸಿಕೊಂಡಿರವ ವೈಟ್  ಫೀಲ್ಡ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com