ರಕ್ತ ಬೇಕಾಗಿದೆ ಎನ್ನುವ ಟ್ವೀಟ್ ನೋಡಿದ ತಕ್ಷಣ ಹರಿಪ್ರಿಯಾ ಆಸ್ಪತ್ರೆಗೆ ದಾವಿಸಿದ್ದರು. ತಮ್ಮ ಸಹಾಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಇಂದು ಸಾರ್ಥಕತೆಯ ಮನೋಭಾವ ಮೂಡಿದೆ. ಆ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಗಿದೆ. ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿ. ಅದರಿಂದ ಒಂದು ಜೀವ ಉಳಿಸಬಹುದು ಎಂದು ಬರೆದುಕೊಂಡಿದ್ದಾರೆ.