ಬೀದಿನಾಯಿಗಳ ದಾಳಿ ಭೀತಿಯಲ್ಲಿ ಬೆಂಗಳೂರು ಜನತೆ

ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಳೆಗಾಲದಲ್ಲಿ ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ವಾಹನ ಸವಾರರ ಮೇಲೂ ನಾಯಿಗಳು ದಾಳಿ ಮಾಡುತ್ತಿದ್ದು, ಜನರಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಳೆಗಾಲದಲ್ಲಿ ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ವಾಹನ ಸವಾರರ ಮೇಲೂ ನಾಯಿಗಳು ದಾಳಿ ಮಾಡುತ್ತಿದ್ದು, ಜನರಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿದೆ.
ಬಿಬಿಎಂಪಿ ನಾಯಿಗಳ ಸಂತಾನದ ಸರಿಯಾಗಿ ಪರೀಕ್ಷಿಸುತ್ತಿಲ್ಲ. ನಾಯಿ ಹಿಡಿಯುವವರು ಪ್ರತಿನಿತ್ಯ ಬರುವುದಿಲ್ಲ. ಸಹಾಯವಾಣಿಗೆ ಕರೆ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಯನಗರದ  ನಾಗರಿಕ ಕ್ರಿಯಾ ವೇದಿಕೆ ಸದಸ್ಯ ಎನ್. ಮುಕುಂದ ಆರೋಪಿಸುತ್ತಾರೆ.
ರಾಜರಾಜೇಶ್ವರಿ ನಗರದ ಬದ್ರಿನಾಥ್ ಕೂಡಾ ಇದೇ ರೀತಿಯ ಆರೋಪ ಮಾಡುತ್ತಾರೆ. ಈ ಸಂಬಂಧ ಶಾಸಕರು ಹಾಗೂ ಪಾಲಿಕೆ ಸದಸ್ಯರನ್ನು ಸಂಪರ್ಕಿಸಿದ್ದರೆ, ಬಿಬಿಎಂಪಿ ಸಂಪರ್ಕಿಸುವಂತೆ ಸಲಹೆ ನೀಡುತ್ತಾರೆ. ಪಾಲಿಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಅವರು ದೂರುತ್ತಾರೆ.
ಬಿಬಿಎಂಪಿಯಿಂದ ಪ್ರತಿಕ್ರಿಯೆಗಾಗಿ ಹೆಚ್ ಬಿಆರ್ ಲೇಔಟ್ ನ ನಿವಾಸಿಯೊಬ್ಬರು ಎರಡು ವರ್ಷ ಕಾಯ್ದಿದ್ದಾರೆ. ಪ್ರಸ್ತುತ ನೌಕರರ ರಕ್ಷಣಾ ಸಿಬ್ಬಂದಿ  ಹಗಲು ಹಾಗೂ ರಾತ್ರಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.
ಮಣಿಪಾಲ್ ಆಸ್ಪತ್ರೆ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ  ಕಾಯುತ್ತಿದ್ದ ಶಾಲಾ ವಿದ್ಯಾರ್ಥಿ ಹಾಗೂ ವಿಹಾರಕ್ಕಾಗಿ ತೆರಳಿದ ವೃದ್ದರೊಬ್ಬರ ಮೇಲೆ ಬೀದಿನಾಯಿಗಳು ಹಾಡುಹಾಗಲೇ ದಾಳಿ ನಡೆಸಿವೆ ಎಂದು ಆರ್ ಆರ್ ನಗರ ತೆರಿಗೆದಾರರ ಸಂಘದ ಅಧ್ಯಕ್ಷ ಬದ್ರಿನಾಥ್ ಹೇಳುತ್ತಾರೆ.
ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದ 74 ವರ್ಷದ ಆನಂದ್ ಕುಮಾರ್ ಅವರ ಮೇಲೂ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದ ಅವರ ಚೇತರಿಸಿಕೊಳ್ಳಲು ಆರು ವಾರ ಬೇಕಾಯಿತು ಎಂದು   ಅವರು ವಿವರಿಸಿದರು. ಪುಟ್ ಬಾತ್ ಗಳು ಯಾವಾಗಲೂ ಬೀದಿನಾಯಿಗಳಿಂದು ತುಂಬಿರುತ್ತವೆ ಎಂದು ವಸಂತನಗರ ನಿವಾಸಿಗಳು ದೂರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com