ಬೆಂಗಳೂರು: ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ನೈಸ್ ಅಡ್ಡಿ

ನೈಸ್ ಸಂಸ್ಥೆಗೆ ಸೇರಿದ ಎಂಟು ಎಕರೆ ಭೂಮಿ ಸ್ವಾಧೀನ ಪಕ್ರಿಯೆ ವಿಳಂಬವಾದ ಕಾರಣ 72.1 ಕಿಮೀ ಉದ್ದದ ಮೆಟ್ರೋ ಫೇಸ್ II ಯೋಜನೆ ಮತ್ತಷ್ಟು ಮುಂದೆ ಹೋಗಲು ಕಾರಣವಾಗಿದೆ.
ಬೆಂಗಳೂರು: ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ನೈಸ್ ಅಡ್ಡಿ
ಬೆಂಗಳೂರು: ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ನೈಸ್ ಅಡ್ಡಿ
ಬೆಂಗಳೂರು:  ನೈಸ್ ಸಂಸ್ಥೆಗೆ ಸೇರಿದ ಎಂಟು ಎಕರೆ ಭೂಮಿ ಸ್ವಾಧೀನ ಪಕ್ರಿಯೆ ವಿಳಂಬವಾದ ಕಾರಣ 72.1 ಕಿಮೀ ಉದ್ದದ ಮೆಟ್ರೋ ಫೇಸ್ II ಯೋಜನೆ ಮತ್ತಷ್ಟು ಮುಂದೆ ಹೋಗಲು ಕಾರಣವಾಗಿದೆ. ಸರ್ಕಾರ ಈ ಸಂಬಂಧ ತುರ್ತು ಕ್ರಮ ತೆಗೆದುಕೊಳ್ಳಲು ಸಿದ್ದವಾಗಿದ್ದು ಮೂರು ಡಿಪೋಗಳಿಗೆ ಸಂಬಂಧಿಸಿದ ಭೂಮಿ ಹೊರತಾಗಿ ಉಳಿದೆಲ್ಲಾ ಭೂಸ್ವಾಧೀನ ಪ್ರಕ್ರಿಯೆಯನ್ನು ಬಿಎಂಆರ್ಸಿಎಲ್ಇದಾಗಲೇ ಪೂರ್ಣಗೊಳಿಸಿದೆ.
2013 ರ ಜಮೀನು ಸ್ವಾಧೀನ ಕಾಯ್ದೆಯಡಿ ಪಾವತಿಸಬೇಕಾದ ಪರಿಹಾರವನ್ನು ದ್ವಿಗುಣಗೊಳಿರುವ ಕಾರಣ ಭೂಮಾಲಿಕರು ತಮ್ಮ ಭೂಮಿಯನ್ನು ಮೂಲಸೌಕರ್ಯಾಭಿವೃದ್ದಿ ಯೋಜನೆಗೆ ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ (ನೈಸ್) ಅಧಿಕಾರಿಗಳಿಗೆ ನೀಡಬೇಕಾದ  ಪರಿಹಾರದ ಬಗ್ಗೆ  ಇನ್ನೂ ತೀರ್ಮಾನವಾಗಿಲ್ಲ. ನೈಸ್ ನ ಹಿಡಿತದಲ್ಲಿ ಬರುವ ಎಂಟು ಎಕರೆ ಭೂಮಿಯ ಇದೀಗ ಮೆಟ್ರೋ ಯೋಝನೆಗೆ ಅಗತ್ಯವಾಗಿದೆ.
ಈ ಎಂಟು ಎಕರೆ ಭೂಮಿಯಲ್ಲಿ ವಿವಿಧ ಕಾಮಗಾರಿಗಳು ನಡೆಯಬೇಕಿದೆ ಎಂದು ಹಿರಿಯ  ಬಿಎಂಆರ್ಸಿಎಲ್ ಅಧಿಕಾರಿ ಹೇಳಿದ್ದಾರೆ.ನಾಗಸಂದ್ರದಿಂದ ಬಿಐಇಸಿ (ರೀಚ್ III) ಗೆ 6 ಎಕರೆ; ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ((ರೀಚ್ V) 7,800 ಚದರ ಮೀಟರ್; ಮೈಸೂರು ರಸ್ತೆಯಿಂದ ಕೆಂಗೇರಿ ( (ರೀಚ್ II): 544 ಚ..ಮೀ ಮತ್ತು ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ ಶಿಪ್ (ರೀಚ್ IV): 200  ಚ.ಮಿ.
ನೈಸ್ ಸಂಸ್ಥೆಗಾಗಿನ ಪರಿಹಾರವನ್ನು ಯಾರಿಗೆ ಸಂದಾಯ ಮಾಡಬೇಕೆನ್ನುವುದು ಸ್ಪಷ್ಟವಿಲ್ಲ ಎಂದು ಬಿಎಂಆರ್ಸಿಎಲ್  ಹೇಳಿದೆ."ಸುಮಾರು ಎರಡು ಎಕರೆಗೆ ಮಾತ್ರ ಮಾರಾಟ ಪತ್ರವನ್ನು ನೈಸ್ ಹೊಂದಿದೆ. ಒಂದು ದಶಕಕ್ಕೂ ಮುಂಚೆಯೇ ಅದು ತನ್ನ ನೈಸ್ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡ ಸುಮಾರು ಆರು ಎಕರೆ ಭೂಮಿಗೆ ನೈಸ್ ಸಂಸ್ಥೆ ಭೂಮಾಲಿಕರಿಗೆ ಇನ್ನೂ ಪರಿಹಾರ ನೀಡಿಲ್ಲ. ಕರ್ನಾಟಕದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಗೆ ಸಹ ಇನ್ನೂ ಪರಿಹಾರ ಮೊತ್ತ ಸಂದಾಯವಾಗಿಲ್ಲ. ಕೆಐಎಡಿಬಿ, ವಿಶೇಷ ಉಪ ಆಯುಕ್ತ (ಭೂ ಸ್ವಾಧೀನ)  ಎಸ್.ಎನ್. ಬಾಲಚಂದರ್ ಅವರ ಪ್ರಕಾರ ಸಮಸ್ಯೆಯನ್ನು ಎರಡು ಮೂರು ವಾರಗಳಲ್ಲಿ ಪರಿಹರಿಸಲಾಗುತ್ತದೆ.
ಬಿಎಂಆರ್ಸಿಎಲ್  ನಮಗೆ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಪರಿಹಾರವನ್ನು ನೀಡಿದರೆ, ನಾವು ಅವರಿಗೆ ಭೂಮಿಯನ್ನು ಹಸ್ತಾಂತರಿಸಲು ಸಿದ್ಧರಿದ್ದೇವೆ" ನೈಸ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಮಾತನಾಡಿ "ನೈಸ್ ಪ್ರತಿನಿಧಿಗಳೊಂದಿಗೆ  ಹಲವು ಸುತ್ತಿನ ಚರ್ಚೆಗಳು ನಡೆದಿದೆ. ಒಂದು ತಿಂಗಳೊಳಗೆ ಸರ್ಕಾರ ಈ ವಿವಾದವನ್ನು ಪರಿಹರಿಸುತ್ತದೆ. ಭೂ ಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ ನಿಗದಿತ ಗಡುವಿನೊಳಗೆ ನಾವು ಕಾಮಗಾರಿ ಪೂರ್ಣಗೊಳಿಸುವ ಭರವಸೆ ಹೊಂದಿದ್ದೇವೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com