"ಯುವಜನತೆ ಹಿರಿಯರಿಗೆ ದೈಹಿಕವಾಗಿ ಹಿಂಸೆ ನಿಡುತ್ತಾರೆ, ಅವರನ್ನು ಮನೆಯಿಂದ ಹೊರಹಾಕುತ್ತಾರೆ.ಬೆಂಗಳೂರು ವಿಶ್ವವಿದ್ಯಾನಿಲಯದ "ಮನೋವಿಜ್ಞಾನ ಪ್ರಾದ್ಯಾಪಕಿಯಾಗಿದ್ದ ಇಂದಿರಾ ಜೈ ಪ್ರಕಾಶ್ ಹೇಳಿದ್ದಾರೆ. "ಪೋಷಕರು ಹಾಗೂ ಹಿರಿಯನಾಗರಿಕ ನಿರ್ವಹಣೆ, ಕಲ್ಯಾಣ ಕಾಯ್ದೆಯ ಅನುಸಾರ ಮಕ್ಕಳು ಯಾರು ಹಿರಿಯರನ್ನು ಪೋಷಿಸುವ ಸಾಮರ್ಥ್ಯ ಹೊಂದಿದ್ದು ಅವರನ್ನು ದೂರ ಮಾಡಿದರೆ ಆಗ ಹಿರಿಯ ನಾಗರಿಕರು ಟ್ರಿಬ್ಯೂನಲ್ ಗೆ ದೂರು ಸಲ್ಲಿಸಬಹುದು. ಈ ಸಮಸ್ಯೆಯ ಪರಿಹಾರಕ್ಕಾಗಿ ಕುಟುಂಬ ಸದಸ್ಯರು ಹೆಚ್ಚು ಸಂವಹನ ನಡೆಸುವ ಅಗತ್ಯವಿದೆ ಎಂದು ಹೆಲ್ತ್ ಏಜ್ ಇಂಡಿಯಾದ ರಾಜ್ಯ ಘಟಕದ ಮುಖ್ಯಸ್ಥೆ ರೇಖಾ ಮೂರ್ತಿ ಹೇಳಿದ್ದಾರೆ." ನಾವು ಹೆಲ್ಪ್ಏಜ್ ಇಂಡಿಯಾ ಎಸ್ ಒ ಎಸ್ ಮೂಲಕ ಹೆಲ್ಪ್ ಲೈನ್ ಸಂಖ್ಯೆ, ವೃದ್ದಾಶ್ರಮ, ಗಳ ಮೂಲಕ ಅವರಿಗೆ ನೆರವಾಗಲು ಬಯಸುತ್ತೇವೆ" ಅವರು ವಿವರಿಸಿದ್ದಾರೆ.