ಯೋಗ ದಿನ ಕಾರ್ಯಕ್ರಮ ಮೈಸೂರಿನಿಂದ ಡೆಹರಾಡೂನ್ ಗೆ ಶಿಫ್ಟ್: ಚುನಾವಣಾ ಫಲಿತಾಂಶ ಕಾರಣ?

ಈ ಬಾರಿಯ ಅಂತರಾಷ್ಟ್ರೀಯ ಯೋ ದಿನಾಚರಣೆಯನ್ನು ಮಲ್ಲಿಗೆ ನಗರಿ ಮೈಸೂರಿನಿಂದ ಡೆಹರಾಡೂನ್'ಗೆ ಶಿಫ್ಟ್ ಮಾಡಲಾಗಿದ್ದು, ಇದಕ್ಕೆ ಕಾರಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಸೋಲು ಎಂಬ ಮಾತುಕತುಗಳ ಕೇಳಿಬರತೊಡಗಿವೆ...
ಯೋಗ ದಿನ ಕಾರ್ಯಕ್ರಮ ಮೈಸೂರಿನಿಂದ ಡೆಹರಾಡೂನ್ ಗೆ ಶಿಫ್ಟ್: ಚುನಾವಣಾ ಫಲಿತಾಂಶ ಕಾರಣ?
ಯೋಗ ದಿನ ಕಾರ್ಯಕ್ರಮ ಮೈಸೂರಿನಿಂದ ಡೆಹರಾಡೂನ್ ಗೆ ಶಿಫ್ಟ್: ಚುನಾವಣಾ ಫಲಿತಾಂಶ ಕಾರಣ?
Updated on
ಮೈಸೂರು; ಈ ಬಾರಿಯ ಅಂತರಾಷ್ಟ್ರೀಯ ಯೋ ದಿನಾಚರಣೆಯನ್ನು ಮಲ್ಲಿಗೆ ನಗರಿ ಮೈಸೂರಿನಿಂದ ಡೆಹರಾಡೂನ್'ಗೆ ಶಿಫ್ಟ್ ಮಾಡಲಾಗಿದ್ದು, ಇದಕ್ಕೆ ಕಾರಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಸೋಲು ಎಂಬ ಮಾತುಕತುಗಳ ಕೇಳಿಬರತೊಡಗಿವೆ. 
ಜೂನ್.21 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನಡೆಯುವ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆಗೆ ಮೈಸೂರು, ಜೈಪುರ, ಅಹಮದಾಬಾದ್, ಡೆಹರಾಡೂನ್, ಹೈದರಾಬಾದ್ ಸೇರಿ ಇನ್ನಿತರೆ ನಗರಗಳ ಹೆಸರು ಪಟ್ಟಿಯಲ್ಲಿತ್ತು. ಇವುಗಳ ಪೈಕಿ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ನಲ್ಲಿ ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮ ಆಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 
ಮಲ್ಲಿಗೆ ನಗರಿ ಮೈಸೂರಿನಲ್ಲಿ ಎರಡು ಬಾರಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಗಿತ್ತು. ಈ ಎರಡೂ ಬಾರಿಯೂ ಮೈಸೂರು ವಿಶ್ವ ದಾಖಲೆಯನ್ನು ಬರೆದಿದೆ. 
ಕಾರ್ಯಕ್ರಮ ಆಯೋಜರು ಹಾಗೂ ಜಿಲ್ಲಾ ಆಡಳಿತ ಮಂಡಳಿ ಅಧಿಕಾರಿಗಳು ಯೋಗ ದಿನಾಚರಣೆಯನ್ನು ಮೈಸೂರಿನಲ್ಲಿಯೇ ಆಯೋಜಿಸುವಂತೆ ಪ್ರಧಾನಿ ಮೋದಿಯವರ ಬಳಿ ಮನವಿ ಮಾಡಿಕೊಂಡಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ಇಲಾಖೆ, ಪ್ರಧಾನಮಂತ್ರಿ ಕಚೇರಿಯ ಪ್ರತಿನಿಧಿಗಳು ಮೈಸೂರು ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೈಸೂರು ಅರಮನೆ ಹಾಗೂ ರೇಸ್ ಕೋರ್ಸ್ ಬಳಿ ಯೋಗ ದಿನಾಚರಣೆ ಆಚರಣೆಗಾಗಿ ಪರಿಶೀಲನೆ ನಡೆಸಿದ್ದರು. 
ಸ್ಥಳೀಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದಿದ್ದರಲ್ಲದೆ, ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಈ ಬಾರಿ ಮೈಸೂರಿನಲ್ಲಿಯೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲು ಪ್ರತಿಯೊಬ್ಬರು ಉತ್ಸುಕರಾಗಿದ್ದರು. ಆದರೆ, ಪ್ರಧಾನಿ ಕಾರ್ಯಕ್ರಮ ಆಯೋಜನೆಗೆ ಬೇಕಾದ ಕೆಲವೊಂದು ಅಗತ್ಯತೆಗಳನ್ನು ಪೂರೈಸುವುದು ಮೈಸೂರಿನಲ್ಲಿ ಕಷ್ಟ ಎಂಬ ಕಾರಣಕ್ಕೆ ಆಯುಷ್ ಸಚಿವಾಲಯ ಡೆಹರಾಡೂನ್ ನಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದೆ. 
ಸರ್ಕಾರ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ಯೋಗ ಶಿಕ್ಷಕರೊಬ್ಬರು, ಯೋಗ ದಿನಾಚರಣೆಗೆ ಮೈಸೂರು ನಗರವನ್ನು ಕೈಬಿಡಲಸು ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಹ ಹಾಗೂ ರಾಜಕೀಯ ಬಿಕ್ಕಟ್ಟುಗಳೂ ಕೂಡ ಒಂದು ರೀತಿಯ ಕಾರಣವಾಗಿರಬಹುದು. ಆಯುಷ್ ಅಧಿಕಾರಿಗಳ ಭರವಸೆಗಳನ್ನು ನೋಡಿ ಈ ಬಾರಿ ಯೋಗ ದಿನಾಚರಣೆಯನ್ನು ಮೈಸೂರಿನಲ್ಲಿ ಆಯೋಜಿಸಲಾಗುತ್ತದೆ ಎಂದು ನಂಬಿದ್ದೆವು. ಇದರಂತೆ ಮತ್ತೊಂದು ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದೆವು ಎಂದು ಹೇಳಿದ್ದಾರೆ. 
ರಾಜಕೀಯ ಕಾರಣಗಳಿಂದಾಗಿ ಅಥವಾ ಭದ್ರತಾ ವಿಚಾರಗಳಿಂದಾಗಿ ಯೋಗ ದಿನಾಚರಣೆಯನ್ನು ಡೆಹ್ರಾಡೂನ್'ಗೆ ಸ್ಥಳಾಂತರಿಸಲಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಯೋಗವನ್ನು ಪ್ರಚುರಪಡಿಸುತ್ತಿದ್ದು, ಮೈಸೂರಿನಲ್ಲಿಯೇ ಯೋಗ ದಿನಾಚರಣೆಯನ್ನು ಆಚರಿಸಬೇಕೆಂದು ಬಯಸುತ್ತೇನೆಂದು ಶ್ರೀಹರಿಯಲ್ಲಿರುವ ಯೋಗ ಒಕ್ಕೂಟ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com