ಯುವಕನ ಸಾವಿನ ಬಳಿಕ ಗೋಕಾಕ್ ಜಲಪಾತದ ಬಳಿ ಹೆಚ್ಚಿದ ಭದ್ರತಾ ಕ್ರಮ

ಯುವಕನ ಸಾವಿನ ಬಳಿಕ ರಾಜ್ಯ ಪೊಲೀಸರು ಗೋಕಾಕ್ ಜಲಪಾತದ ಬಳಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಯುವಕನ ಸಾವಿನ ಬಳಿಕ ರಾಜ್ಯ ಪೊಲೀಸರು ಗೋಕಾಕ್ ಜಲಪಾತದ ಬಳಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. 
ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಜಲಾಪಾತದ ತಾಣ ಇದೀಗ ಸಾವಿನ ತಾಣವಾಗಿ ಮಾರ್ಪಟ್ಟಿದೆ. ಅಪಾಯದ ಸೂಚನೆಗಳ ಹೊರತಾಗಿಯೂ ಪ್ರವಾಸಿಗರು ಫೋಟೋ ತೆಗೆದುಕೊಳ್ಳುವ ಸಲುವಾಗಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. 
ಗೋಕಾಕ್ ಜಲಪಾತದ ಬಳಿಯಿರುವ ಸೇತುವೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸೇತುವೆಯನ್ನು ಮುಚ್ಚಲಾಗಿದೆ. ಹೀಗಾಗಿ ಪ್ರವಾಸಿಗರು ಜಲಪಾತದ ತುತ್ತತುದಿಗೆ ತಲುಪುವ ಸಲುವಾಗಿ ತಮ್ಮ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ. 
ಜಲಪಾತದ ತುದಿಗಳಲ್ಲಿ ಭದ್ರತೆಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಘಟಪ್ರಭಾ ಅಣೆಕಟ್ಟಿನಿಂದ ಈ ತಿಂಗಳು ಜಲಪಾಕಕ್ಕೆ ನೀರು ಬಿಡುವ ಸಾಧ್ಯತೆಗಳಿದ್ದು, ಜಲಪಾತದ ನೀರಿನ ವೇಗ ಮತ್ತಷ್ಟು ಹೆಚ್ಚಾಗಲಿದೆ. ಇದು ಬಹುತೇಕ ಪ್ರವಾಸಿಗರ ಕಣ್ಮನವನ್ನು ಸೆಳೆಯಲಿದೆ. ನೀರು ಬಿಡುಗಡೆ ಮಾಡುವುದಕ್ಕೂ ಮುನ್ನ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಭದ್ರತಾ ಕ್ರಮಗಳ ಕುರಿತಂತೆ ಗೋಕಾಕ್ ಮಿಲ್ಸ್ ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆ ಮತ್ತು ನಗರಪಾಲಿಕೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಯುವಕನ ಸಾವಿನ ಬಳಿಕ ಸ್ಥಳದಲ್ಲಿ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಜಲಪಾತದ ಗಳಿ ಪೊಲೀಸರು ಭದ್ರತೆಯನ್ನು ನೀಡಲಿದ್ದಾರೆ. ಜಲಪಾತದ ತುದಿಯತ್ತ ಜನರು ಹೋಗದಂತೆ ಪೊಲೀಸರು ನೋಡಿಕೊಳ್ಳಲಿದ್ದಾರೆಂದು ತಿಳಿಸಿದ್ದಾರೆ. 
ಕಳೆದ ಐದು ವರ್ಷಗಳಲ್ಲಿ ಜಲಪಾತದ ಬಳಿ ನಡೆದ ಅಪಘಾತಗಳು ಹಾಗೂ ಆತ್ಮಹತ್ಯೆ ಪ್ರಕರಣಗಳಿಂದ ಒಟ್ಟು 19 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ವರದಿ ನೀಡಿದ್ದಾರೆ. 
ನಿನ್ನೆಯಷ್ಟೇ ಸಾವನ್ನಪ್ಪಿದ್ದ ಯುವಕ ಘಟನೆ ವೇಳೆ ಪಾನಮತ್ತನಾಗಿದ್ದ. ಈ ವೇಳೆ ಘಟನೆ ನಡೆದಿದೆ. ಜಲಪಾತದಿಂದ ರಂಜಾನ್ ಕೆಳಗೆ ಬಿದ್ದಿದ್ದ. ಬಳಿಕ ಆತನ ಸಹೋದರ ಫರೂಖ್ ನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಫರೂಖ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕೊಳಪಡಿಸಲಾಗಿದೆ ಎಂದಿದ್ದಾರೆ. 
ಯುವಕ 180 ಅಡಿ ಎತ್ತರದಿಂದ ಗೋಕಾಕ್ ಜಲಪಾತಕ್ಕೆ ಬಿದ್ದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com