ಉಭಯ ನಾಯಕರನ್ನು ಭೇಟಿ ಮಾಡಿದ ಬಳಿಗ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾರಸ್ವಾಮಿಯವರು, ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿ ರಾಜ್ಯಗಳೊಂದಿಗೆ ಕಾವೇರಿ ನದಿ ನೀರು ಹಂಚಿಕೊಳ್ಳುವ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಲೆ ಬಾಗುತ್ತೇವೆ. ರಾಜ್ಯದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವನ್ನು 10 ದಿನಗಳಿಗೊಮ್ಮೆ ಅಳತೆ ಮಾಡುವುದು, ರಾಜ್ಯದ ರೈತರು ಯಾವ ಬೆಳೆ ಬೆಳೆಯಬೇಕು ಅಥವಾ ಇಂತಹದ್ದೇ ಬೆಳೆ ಬೆಳೆಯಬೇಕು ಎಂಬ ನಿರ್ಧಾರವನ್ನು ಮಂಡಳಿ ಕೈಗೊಳ್ಳುವುದು ಅವೈಜ್ಞಾನಿಕವಾಗಿದೆ. ಲೋಪದೋಷಗಳ ಅಂಶಗಳನ್ನು ಪ್ರಧಾನಿ ಮೋದಿಯವರಿಗೆ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.