ಪ್ರಶ್ನೆಪತ್ರಿಕೆ ಸೋರಿಕೆ: ಮರು ಪರೀಕ್ಷೆ ಇಲ್ಲ ಎಂದ ವಿಟಿಯು

ಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಇತ್ತೀಚೆಗೆ ನಡೆಸಿದ್ದ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಯಾದ ವಿಚಾರಕ್ಕೆ ಸಂಬಂಧಿಸಿ ತಾನು ಇನ್ನೊಮ್ಮೆ....
ಪ್ರಶ್ನೆಪತ್ರಿಕೆ ಸೋರಿಕೆ: ಮರು ಪರೀಕ್ಷೆ ಇಲ್ಲ ಎಂದ ವಿಟಿಯು
ಪ್ರಶ್ನೆಪತ್ರಿಕೆ ಸೋರಿಕೆ: ಮರು ಪರೀಕ್ಷೆ ಇಲ್ಲ ಎಂದ ವಿಟಿಯು
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಇತ್ತೀಚೆಗೆ ನಡೆಸಿದ್ದ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾದ ವಿಚಾರಕ್ಕೆ ಸಂಬಂಧಿಸಿ ತಾನು ಇನ್ನೊಮ್ಮೆ ಪರೀಕ್ಷೆಗಳನ್ನು ಆಯೋಜಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ವಿಶ್ವವಿದ್ಯಾನಿಲಯದ ಐಟಿ ತಂಡ ನೀಡಿರುವ ವರದಿಯನ್ವಯ ಸೋರಿಕೆಯಾಗಿದೆ ಎಂದು ಹೇಳಲಾದ ಪ್ರಶ್ನೆ ಪತ್ರಿಕೆಯು ನಕಲಿ ಪ್ರಶ್ನೆಪತ್ರಿಕೆಯಾಗಿದ್ದು ಕೆಲ ಪುಂಡರು ರಚಿಸಿರುವ ನಕಲಿ ಪ್ರಶ್ನಾವಳಿಗಳು ಇದರಲ್ಲಿದೆ ಎಂದು ವಿಟಿಯು ಅಧಿಕಾರಿಗಳು ಹೇಳಿದ್ದಾರೆ. ಅದಾಗ್ಯೂ ಅಂತಹಾ ಕೃತ್ಯ ನಡೆಸಿದವರ ಮೂಲ ತಿಳಿದುಕೊಳ್ಳಲು ವಿಶ್ವವಿದ್ಯಾನಿಲಯ ತನಿಖಾ ಸಮಿತಿಯೊಂದನ್ನು ಆಯೋಜಿಸಿದೆ. "ಇದೇನೂ ಮೊದಲ ಬಾರಿ ನಡೆಯುತ್ತಿಲ್ಲ, ಈ ಹಿಂದೆ ಸಹ ನಕಲಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿದ್ದವು. ಇದೀಗ ನಾವು ಈ ಸಂಬಂಧ ತನಿಖೆ ನಡೆಸಲು ಸಮಿತಿಯನ್ನು ರೂಪಿಸಿದ್ದೇವೆ" ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ನಡೆದಿದ್ದ  ಗಣಿತ II (ಪುನರಾವರ್ತಿತ ಪತ್ರಿಕೆ)  ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಗುರುವಾರವೇ ಸಾಮಾಜಿಕ ತಾಣಗಳಲ್ಲಿ ಅಕ್ರಮವಾಗಿ ಹರಿದಾಡುತ್ತಿದ್ದವು.  ಬೆಳಿಗ್ಗೆ ಹತ್ತರ ವೇಳೆಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಒಳಗೊಂಡ ವಾಟ್ಸ್ ಅಪ್ ಸಂದೇಶಗಳು ಒಂಭತ್ತು ಗಂಟೆಯಿಂಡಲೇ ಹರಿದಾಡಲು ಪ್ರಾರಂಭಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com