ಬೆಂಗಳೂರು: ಕರೆಂಟ್ ಕಟ್ ಕುರಿತು ಶೀಘ್ರದಲ್ಲಿಯೇ ನಿಮ್ಮ ಮೊಬೈಲ್'ಗೆ ಬರಲಿದೆ ಸಂದೇಶ

ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆದಾಗ, ಮಾಡುತ್ತಿದ್ದ ವಿದ್ಯುತ್ ಆಧಾರಿತ ಕೆಲಸಗಳು ಅರ್ಧಕ್ಕೆ ನಿಂತು ಹೋದಾಗ ಜನರು ಬೆಸ್ಕಾಂ ಸಿಬ್ಬಂದಿಗಳನ್ನು ಬಯ್ದುಕೊಳ್ಳುವುದು ಸಾಮಾನ್ಯ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವ ಬೆಸ್ಕಾಂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು; ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆದಾಗ, ಮಾಡುತ್ತಿದ್ದ ವಿದ್ಯುತ್ ಆಧಾರಿತ ಕೆಲಸಗಳು ಅರ್ಧಕ್ಕೆ ನಿಂತು ಹೋದಾಗ ಜನರು ಬೆಸ್ಕಾಂ ಸಿಬ್ಬಂದಿಗಳನ್ನು ಬಯ್ದುಕೊಳ್ಳುವುದು ಸಾಮಾನ್ಯ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವ ಬೆಸ್ಕಾಂ, ಕರೆಂಟ್ ಯಾವಾಗ ಹೋಗುತ್ತದೆ, ಅನಿಯಮಿತ ವಿದ್ಯುತ್ ಕಡಿತ ಸೇರಿದಂದೆ ಇತರೆ ಮಾಹಿತಿಗಳನ್ನು ಜನರಿಗೆ ಮುಂಚಿತವಾಗಿಯೇ ನೀಡಲು (ಬೆಸ್ಕಾಂ) ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿ ನಿರ್ಧರಿಸಿದೆ. 
ಗ್ರಾಹಕರಿಗಾಗಿ ಈಗಾಗಲೇ ಬೆಸ್ಕಾಂ ಅಧಿಕಾರಿಗಳು ಬೆಸ್ಕಾಂ ಮಿತ್ರ ಆ್ಯಪ್ ಬಿಡುಗಡೆ ಮಾಡಿದ್ದು, ಈ ಆ್ಯಪ್ ಮೂಲಕ ಜನರಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಯಾವಾಗ ವಿದ್ಯುತ್ ಕಡಿತಗೊಳ್ಳುತ್ತದೆ, ಮತ್ತೆ ಯಾವಾಗ ವಿದ್ಯುತ್ ಬರುತ್ತದೆ ಎಂಬೆಲ್ಲಾ ಮಾಹಿತಿಗಳ ಕುರಿತು ಜನರಿಗೆ ಮಾಹಿತಿ ನೀಡಲಿದೆ. 
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆ್ಯಪ್ ವಿದ್ಯುತ್ ಸಂಪರ್ಕಗಳು ಎಲ್ಲೆಲ್ಲಿ ಕಡಿತಗೊಂಡಿವೆ ಎಂಬುದರ ಕುರಿತ ಮಾಹಿತಿಗಳನ್ನಷ್ಟೇ ನೀಡುತ್ತಿತ್ತು. ಈ ಆ್ಯಪ್ ನಿಧಾನಗತಿಯಲ್ಲಿ ಮಾಹಿತಿ ನೀಡುತ್ತಿತ್ತು. 
ನಮ್ಮ ಸಿಬ್ಬಂದಿಗಳಿಗೆ ತರಬೇತಿಗಳ್ನು ನೀಡಲಾಗುತ್ತಿದ್ದು, ಮಾಹಿತಿಗಳನ್ನು ಹೇಗೆ ಆ್ಯಪ್ ಗಳಿಗೆ ಹಾಕಬೇಕೆಂಬುದನ್ನು ಹೇಳಿಕೊಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಪ್ರಸ್ತುತ ಉಧ್ದೇಶಿಸಲಾಗಿರುವ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದೇ ಆದರೆ, ಸಮಸ್ಯೆಗಳನ್ನು ಹೇಳಿಕೊಂಡು ಬೆಸ್ಕಾಂಗೆ ಕರೆ ಮಾಡುವ ಜನರ ಸಂಖ್ಯೆ ಕೂಡ ಕಡಿಮೆಯಾಗಲಿದೆ. 
ಬೆಸ್ಕಾಂ ಸಹಾಯವಾಣಿ 1912 ಕಾರ್ಯನಿರ್ವಹಿಸುತ್ತಿದ್ದು, ನೆಟ್'ವರ್ಕ್ ಜಾಮ್ ಆಗುವುದರಿಂದ ಎಷ್ಟೋ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹೀಗಾಗಿ ಆ್ಯಪ್ ಮೂಲಕ ಜನರಿಗೆ ವಿದ್ಯುತ್ ಯಾವಾಗ ಕಡಿತಗೊಳ್ಳುತ್ತದೆ, ಮತ್ತೆ ಯಾವಾಗ ಬರುತ್ತದೆ ಎಂಬ ಮಾಹಿತಿಗಳನ್ನು ನೀಡಲಾಗುತ್ತದೆ. ಇದರಿಂದ ಜನರು ಕರೆ ಮಾಡುವುದು, ದೂರು ನೀಡುವ ಅಗತ್ಯಗಳು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಬೆಸ್ಕಾಂ ಆ್ಯಪ್ ಬಿಡುಗಡೆಯಾಗಿ 6 ತಿಂಗಳುಗಳಾಗಿದ್ದು, ನಗರದಲ್ಲಿ 1.10 ಕೋಟಿ ಜನರು ಬೆಸ್ಕಾಂ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕರು ದಕ್ಷಿಣ ಮತ್ತು ಪೂರ್ವ ಭಾಗದ ಜನರೇ ಹೆಚ್ಚಾಗಿದ್ದಾರೆ. ಬಹುತೇಕ ಜನರು ಬಿಲ್ ಪಾವತಿಸಲು ಹಾಗೂ ದೂರು ದಾಖಲಿಸುವ ಸಲುವಾಗಿ ಬಳಕೆ ಮಾಡುತ್ತಿದ್ದಾರೆಂದು ಬೆಸ್ಕಾಂ ವಕ್ತಾರರು ಹೇಳಿದ್ದಾರೆ. 
ಬೆಸ್ಕಾಂ ಆ್ಯಪ್ ಬಳಕೆ ಹೆಚ್ಚಿಸುವ ಸಲುವಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಆ್ಯಪ್ ಡೌನ್ ಲೋಡ್ ಮಾಡುವವರಿಗೆ ಪ್ರೋತ್ಸಾಹಗಳನ್ನು ನೀಡಲು ನಿರ್ಧರಿಸಲಾಗಿದೆ. ಜನರಿಗೆ ಯಾವ ರೀತಿಯ ಪ್ರೋತ್ಸಾಹ ನೀಡಬಹುದು ಎಂಬುದರ ಕುರಿತಂತೆ ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com