ಇವಿಎಂ ಮೇಲೆ ಶಂಕೆ: ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಹೈಕೋರ್ಟ್ ಮೊರೆ

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕೆಲ ಅಭ್ಯರ್ಥಿಗಳು ವಿದ್ಯುನ್ಮಾನ ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿ ಹೈಕೋರ್ಟಿನಲ್ಲಿ ಪ್ರತ್ಯೇಕ ಚುನಾವಣಾ ದೂರುಗಳನ್ನು ಸಲ್ಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ  ಸೋತ ಕೆಲ   ಅಭ್ಯರ್ಥಿಗಳು  ವಿದ್ಯುನ್ಮಾನ  ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿ  ಹೈಕೋರ್ಟಿನಲ್ಲಿ ಪ್ರತ್ಯೇಕ ಚುನಾವಣಾ ದೂರುಗಳನ್ನು ಸಲ್ಲಿಸಿದ್ದಾರೆ.  ಬಿಜೆಪಿ ವಿರುದ್ಧ ಸ್ಪರ್ಧಿಸಿ ಸೋತಿರುವ ಬಹುತೇಕ ಕಾಂಗ್ರೆಸ್ ಸದಸ್ಯರು ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಮೈಸೂರಿನ ಎನ್. ಆರ್. ಕ್ಷೇತ್ರದಲ್ಲಿ ತನ್ವೀರ್ ಸೇಠ್ ವಿರುದ್ಧ ಸ್ಪರ್ಧಿಸಿದ್ದ ಎಸ್ ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್  ಹಾಗೂ  ಬಿಜೆಪಿಯ ಎಲ್ ನಾಗೇಂದ್ರ ಹಾಗೂ ರಾಮದಾಸ್ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷದ ವಾಸು ಹಾಗೂ ಎಂ. ಕೆ. ಸೋಮಶೇಖರ್  ಅರ್ಜಿ ಸಲ್ಲಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಅಭ್ಯರ್ಥಿ ಮೊಹಿದ್ದುನ್ ಬಾವಾ ಹಾಗೂ  ಜಿ. ಆರ್. ಲೊಬೊ  ಕೂಡಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ಇವರಲ್ಲದೆ ತುಮಕೂರಿನ ಬಿ. ಸುರೇಶ್ ಗೌಡ, ಡಿ.ಎ. ಗೋಪಾಲ,  ಧಾರವಾಡದ ಮಹೇಶ್ ನಾಲ್ವಡ್,  ಸಕಲೇಶಪುರದ ಎ. ವಿ. ನರೇಶ್.  ಜಗಳೂರು ತಾಲೂಕಿನ ಹೆಚ್. ಪಿ. ರಾಜೇಶ್,  ಮತ್ತಿತರರು ಅರ್ಜಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com