'ಹಿಜಾಬ್' ಪ್ರತಿಭಟನೆಗೆ ಯಾರನ್ನೂ ಕಾಲೇಜಿನಿಂದ ಅಮಾನತು ಮಾಡಿಲ್ಲ: ಪ್ರಾಂಶುಪಾಲೆ

ಮುಸಲ್ಮಾನ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ತಲೆಗೆ ಸ್ಕಾರ್ಫ್(ಹಿಜಾಬ್) ಕಟ್ಟಿಕೊಳ್ಳಬಾರದು ಎಂಬ ...
ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲೆ ಸಿಸ್ಟರ್ ಜೆಸ್ವಿನ್
ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲೆ ಸಿಸ್ಟರ್ ಜೆಸ್ವಿನ್

ಮಂಗಳೂರು: ಮುಸಲ್ಮಾನ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ತಲೆಗೆ ಸ್ಕಾರ್ಫ್ (ಹಿಜಾಬ್) ಕಟ್ಟಿಕೊಳ್ಳಬಾರದು ಎಂಬ ನಿಯಮ ವಿರೋಧಿಸಿ ಕಳೆದ 25ರಂದು ನಡೆದ ಪ್ರತಿಭಟನೆಗೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಜೆಸ್ವನಾ, ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿನಿಯರ ಪೋಷಕರ ಸಭೆ ಕರೆದು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

ನಿನ್ನೆ ಕಾಲೇಜಿನ ಸಿಬ್ಬಂದಿ ಮಂಡಳಿ ಸಭೆಯ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ವಸ್ತ್ರ ಸಂಹಿತೆ ಬಗ್ಗೆ ವಿದ್ಯಾರ್ಥಿಗಳಿಗೆ ಒಪ್ಪಿಗೆಯಾಗುವಂತಹ ಎಂತಹ ನಿಯಮ ಜಾರಿಗೆ ತರಬಹುದೆಂದು ಸದ್ಯವೇ ನಿರ್ಧರಿಸಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶದ ಅಗತ್ಯವಿದೆ ಎಂದರು.

ಈ ವಿಷಯ ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಪೋಷಕರ ಮಧ್ಯದ್ದಾಗಿದ್ದು ಹೊರಗಿನವರು ಮಧ್ಯಪ್ರವೇಶಿಸಬಾರದು ಎಂದರು. ಕಾಲೇಜಿನ ನೀತಿ ನಿಯಮಗಳ ವಿರುದ್ಧ ಪ್ರತಿಭಟನೆ ಮಾಡುವಂತೆ ಭಾರತೀಯ ಕಾಲೇಜು ಒಕ್ಕೂಟ ತಮಗೆ ಪ್ರಚೋದನೆ ನೀಡಿದೆ ಎಂದು ವಿದ್ಯಾರ್ಥಿಗಳು ತಮಗೆ ಹೇಳಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಯಾವ ವಿದ್ಯಾರ್ಥಿಗಳನ್ನೂ ಕೂಡ ಕಾಲೇಜಿನಿಂದ ಅಮಾನತು ಮಾಡಿಲ್ಲ. ಅವರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕಾರಣ ಕೇಳಿ ಇಂದು ಸಂಜೆಯೊಳಗೆ ವಿವರಣೆ ನೀಡುವಂತೆ ಹೇಳಲಾಗಿದೆ. ಇದುವರೆಗೆ 30 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಲಿಖಿತ ಕ್ಷಮೆ ಕೇಳಿದ್ದಾರೆ ಎಂದು ಸಿಸ್ಟರ್ ಜೆಸ್ವಿನಾ ಹೇಳಿದ್ದಾರೆ.

ಸುಮಾರು 6 ಸಾವಿರ ವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸರ ಭದ್ರತೆಯನ್ನು ಕೇಳಲಾಗಿದೆ ಎಂದರು.

ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್ ಧರಿಸಬಾರದೆಂದು ಆಡಳಿತ ಮಂಡಳಿ ತಂದ ನಿಯಮವನ್ನು ವಿರೋಧಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದು ವ್ಯಾಪಕ ಸುದ್ದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com