ಜಿಪಿಎಸ್ ಆಧಾರಿತ ಸರ್ವೆಯಿಂದ ಬೆಳೆನಷ್ಟ ಮೌಲ್ಯಮಾಪನಕ್ಕೆ ನೆರವು - ಕೃಷ್ಣಬೈರೇಗೌಡ

ರಾಜ್ಯದಲ್ಲಿ ಜಿಪಿಎಸ್ ಆಧಾರಿತ ಸರ್ವೆಯಿಂದ ಬೆಳೆನಷ್ಟ ಮೌಲ್ಯ ಮಾಪನಕ್ಕೆ ಬಹಳಷ್ಟು ನೆರವಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಜಿಪಿಎಸ್ ಆಧಾರಿತ ಸರ್ವೆಯಿಂದ  ಬೆಳೆನಷ್ಟ ಮೌಲ್ಯ ಮಾಪನಕ್ಕೆ  ಬಹಳಷ್ಟು ನೆರವಾಗುತ್ತಿದ್ದು, ಸಾಂಪ್ರದಾಯಿಕ ಪದ್ಧತಿಯ ಸರ್ವೆಗೂ ಈ ಸರ್ವೆಗೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಶೇಕಡ 30ರಿಂದ 300ರವರೆಗೂ ವ್ಯತ್ಯಾಸ ಗುರುತಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

 ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,  2017ರ ಅಂತ್ಯಭಾಗದಲ್ಲಿ ಮೊದಲ ಬಾರಿಗೆ ಇದರ ಮೂಲಕ  ಸರ್ವೆ ನಡೆಸಲಾಗುತ್ತಿದ್ದುರಾಜ್ಯಾದ್ಯಂತ 2.2 ಕೋಟಿ ಕೃಷಿ ಭೂಮಿಯಲ್ಲಿ ಸರ್ವೆ ನಡೆಸಲಾಗಿದೆ.  ಬೆಳೆನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷಿಕರು ತಾವೂ ಬೆಳೆದಂತಹ ಬೆಳೆಯ ಪೋಟೋವನ್ನು ಆಪ್ ಮೂಲಕ ಅಪ್ ಲೋಡ್ ಮಾಡಿದ್ದರೆ, ಅದು ಸರ್ಕಾರದ ಸರ್ವರ್ ನಲ್ಲಿ ಸಂಗ್ರಹವಾಗಲಿದೆ. ಇದರ ಆಧಾರದ ಮೇಲೆ  ಸರ್ಕಾರದಿಂದ ಬಿಡುಗಡೆಯಾಗುವ ಪರಿಹಾರ ಅಥವಾ ವಿಮೆ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹೊಸ ವಿಧಾನದಿಂದ ಬೆಳೆನಷ್ಟದ ಸ್ಪಷ್ಟ ವರದಿ ತಿಳಿಯಲು ಸಹಾಯವಾಗುವುದರ ಜೊತೆಗೆ ಪರಿಹಾರಕ್ಕಾಗಿ ಕೇಂದ್ರಕ್ಕೂ ಕಳುಹಿಸಲಾಗುತ್ತಿದೆ. ಅಲ್ಲದೇ ಪರಿಹಾರ ವಿತರಣೆಯಲ್ಲೂ ಆಗುತ್ತಿದ್ದ ಭ್ರಷ್ಟಾಚಾರದ ಪ್ರಮಾಣವೂ ತಗ್ಗಿದೆ ಎಂದರು.

 ಬಹುತೇಕ ಕೃಷಿ ಭೂಮಿಯಲ್ಲಿ ಜಿಪಿಎಸ್  ಮೂಲಕ ಸರ್ವೆ ನಡೆಸಲಾಗುತ್ತಿದ್ದು, ರೈತರ ಖಾತೆಗಳಿಗೆ ನೇರವಾಗಿ ಬೆಳೆ ನಷ್ಟ ಹಣ ವರ್ಗಾವಣೆಯಾಗುತ್ತಿರುವುದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com