ಕರ್ನಾಟಕ: ಹೈಕೋರ್ಟ್ ನ್ಯಾಯಮೂರ್ತಿಗಳ ಭದ್ರತೆ ಪರಿಶೀಲನೆಗೆ ಸಮಿತಿ

ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಹೈಕೋರ್ಟ್, ಇದೀಗ ರಾಜ್ಯದಲ್ಲಿರುವ ತನ್ನ ಮೂರು ಪೀಠಗಳ, ನ್ಯಾಯಮೂರ್ತಿಗಳ ನಿವಾಸಗಳಿಗೆ ಭದ್ರತಾ ವ್ಯವಸ್ಥೆ...
ಹೈ ಕೋರ್ಟ್
ಹೈ ಕೋರ್ಟ್
ಬೆಂಗಳೂರು: ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಹೈಕೋರ್ಟ್, ಇದೀಗ ರಾಜ್ಯದಲ್ಲಿರುವ ತನ್ನ ಮೂರು ಪೀಠಗಳ, ನ್ಯಾಯಮೂರ್ತಿಗಳ ನಿವಾಸಗಳಿಗೆ ಭದ್ರತಾ ವ್ಯವಸ್ಥೆ ಕಾರ್ಯನಿರ್ವಹಣೆಯ ವಿವಿಧ ಅಂಶಗಳ ಪರಿಶೀಲನೆಗೆ ಭದ್ರತಾ ಸಮಿತಿಯನ್ನು ರಚನೆ ಮಾಡಿದೆ. 
ಭದ್ರತಾ ಸಮಿತಿಯಲ್ಲಿ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿಯವರು ಇದ್ದಾರೆ, ಹಾಗೆಯೇ ಆಡಳಿತ ವಿಭಾಗದ ರಿಜಿಸ್ಟ್ರಾರ್ ಸಮಿತಿಯಲ್ಲಿ ಪ್ರೆಸೆಂಟಿಂಗ್ ಅಧಿಕಾರಿಯಾಗಿದ್ದಾರೆ. 
ಈ ಭದ್ರತಾ ಸಮಿತಿ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠ, ಮುಖ್ಯ ನ್ಯಾಯಮೂರ್ತಿ ಮತ್ತು ಎಲ್ಲಾ ನ್ಯಾಯಮೂರ್ತಿಗಳ ನಿವಾಸಿಗಳ ಭದ್ರತಾ ವ್ಯವಸ್ಥೆ ಕಾರ್ಯನಿರ್ವಹಣೆಯ ವಿವಿಧ ಅಂಶಗಳನ್ನು ಪರಿಶೀಲಿಸಲಿದೆ. 
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ಆದೇಶದ ಅನುಸಾರ ಭದ್ರತಾ ಸಮಿತಿ ರಚಿಸಿ ರಿಜಿಸ್ಟ್ರಾರ್ ಜನರಲ್ ಅಶೋಕ್ ಜಿ. ನಿಜಗಣ್ಣನವರ್ ಮಾರ್ಚ್.7ರಂದು ಆದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com