ಶಾಲಾ ಮುಖ್ಯೋಪಾದ್ಯಾಯರಿಂದ ವಿದ್ಯಾರ್ಥಿಗೆ ಥಳಿತ : ತಲೆಗೆ ಗಾಯ

ಶಾಲಾ ಮುಖ್ಯೋಪಾಧ್ಯಾಯರು ಥಳಿಸಿದ್ದರಿಂದ 9 ನೇ ತರಗತಿ ವಿದ್ಯಾರ್ಥಿ ತೆಲೆಗೆ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಾಲಾ ಮುಖ್ಯೋಪಾಧ್ಯಾಯರು ಥಳಿಸಿದ್ದರಿಂದ 9 ನೇ ತರಗತಿ ವಿದ್ಯಾರ್ಥಿ ತೆಲೆಗೆ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

  ಒಲ್ಡ್ ಪೋರ್ಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ್, ಗುರುವಾರ ಬೆಳಗ್ಗೆ ಹಾಲು ಪಡೆಯಲು ಸರದಿ ಸಾಲಿನಲ್ಲಿ ಬರಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ  ಥಳಿಸಿದ್ದಾನೆ. ರಕ್ತಸ್ರಾವವಾಗಿ ವಿದ್ಯಾರ್ಥಿ ನರಳುತ್ತಿದ್ದರೂ ಆತ ಆಸ್ಪತ್ರೆಗೆ ಸೇರಿಸಿರಲಿಲ್ಲ. ನಂತರ 10 ನೇ ತರಗತಿ ವಿದ್ಯಾರ್ಥಿಗಳು, ಗಾಯಗೊಂಡ ವಿದ್ಯಾರ್ಥಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಲೆಗೆ ಹೊಲಿಗೆ ಹಾಕಲಾಗಿದ್ದು, ಎಂಆರ್ ಐ ಸ್ಕ್ಯಾನ್ ನಡೆಸಲಾಗಿದೆ. ವರದಿ ಇನ್ನೂ ಬಂದಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ಸಾರ್ವಜನಿಕ  ಸೂಚನಾ ವಿಭಾಗದ ಉಪ ನಿರ್ದೇಶಕ ನಾರಾಯಣಗೌಡ, ಬಿಇಓಯಿಂದ ಮಾಹಿತಿ ಪಡೆದಿದ್ದು, ಪ್ರೌಢಶಾಲೆಗಳು ನೇರವಾಗಿ ಆಯುಕ್ತರ ಅಧೀನದಲ್ಲಿ ಬರುವುದರಿಂದ ಆಯುಕ್ತರಿಗೆ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.

ಸ್ಥಳದಲ್ಲಿಯೇ ಚಿಕಿತ್ಸೆ ನೆರವು  ದೊರೆಯದಿದ್ದರಿಂದ ಪೋಷಕರು ಆತಂಕಗೊಂಡಿದ್ದಾರೆಯ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.

 ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಬಳಿಕ ಶಾಲಾ ಮುಖ್ಯೋಪಾಧ್ಯಾಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com