ಸಹಕಾರ ಬ್ಯಾಂಕುಗಳತ್ತ ಸೈಬರ್ ಕ್ರಿಮಿನಲ್ ಗಳ ಚಿತ್ತ : ಮೂರು ಕಡೆ ವಂಚನೆ

ಸಹಕಾರ ಬ್ಯಾಂಕುಗಳಲ್ಲಿನ ಸೈಬರ್ ಭದ್ರತಾ ವೈಫಲ್ಯದ ಪ್ರಯೋಜನ ಪಡೆದ ಸೈಬರ್ ಕ್ರಿಮಿನಲ್ಸ್ ಗಳು ವಾರದಲ್ಲಿ ಮೂರು ಕಡೆ ವಂಚನೆಗೆ ಯತ್ನಿಸಿದ್ದು, 22.15 ಲಕ್ಷ ಹಣ ಲಪಟಾಯಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಸಹಕಾರ ಬ್ಯಾಂಕುಗಳಲ್ಲಿನ ಸೈಬರ್ ಭದ್ರತಾ ವೈಫಲ್ಯದ ಪ್ರಯೋಜನ ಪಡೆದ ಸೈಬರ್ ಕ್ರಿಮಿನಲ್ಸ್ ಗಳು ವಾರದಲ್ಲಿ ಮೂರು ಕಡೆ  ವಂಚನೆಗೆ ಯತ್ನಿಸಿದ್ದು,  22.15 ಲಕ್ಷ ಹಣ  ಲಪಟಾಯಿಸಲಾಗಿದೆ.

ಹೊಸಕೋಟೆ, ಚಿಂತಾಮಣಿ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಫೆಬ್ರವರಿ 26 ರಂದು ಸೈಬರ್ ಅಪರಾಧ ಪ್ರಕರಣ ನಡೆದಿದ್ದು ತಡವಾಗಿ  ಬೆಳಕಿಗೆ ಬಂದಿದೆ.

ಬ್ಯಾಂಕಿನ ತಮ್ಮ ಖಾತೆಯಲ್ಲಿರುವ  22.15 ಲಕ್ಷ ಹಣವನ್ನು  ಮುಂಬೈಯಲ್ಲಿ ಹೆಚ್ ಪಿಸಿಎಲ್ ನಿರ್ವಹಣೆ ಮಾಡುತ್ತಿರುವ  ಹೆಚ್ ಡಿಎಫ್ ಸಿ ಬ್ಯಾಂಕಿಗೆ  ವರ್ಗಾಯಿಸುವಂತೆ  ಖಾತೆದಾರರಾದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸರ್ವಿಸ್ ಸ್ಟೇಷನ್ ಮನವಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಇವರ ಮನವಿಗೆ ಬ್ಯಾಂಕಿನ ಮ್ಯಾನೇಜರ್ ಅಂಜಿನಪ್ಪ ಅನುಮೋದನೆ ನೀಡಿದ್ದು, ಹೊಸಕೋಟೆಯಲ್ಲಿನ ಬ್ಯಾಂಕಿನ ಕೇಂದ್ರ  ಕಚೇರಿಗೆ ಆದೇ ದಿನ ಮಧ್ಯಾಹ್ನ 3-40ರ ಸಮದಯದಲ್ಲಿ ಇ-ಮೇಲ್ ಕಳುಹಿಸಲಾಗಿದೆ.
 ಆದರೆ, ಸ್ವೀಕರಿಸಲಾದ ಇ-ಮೇಲ್ ನಲ್ಲಿ ಫಲಾನುಭವಿಗಳ ಮಾಹಿತಿ ಹಾಗೂ ಸಹಿಯಲ್ಲಿ ಬದಲಾವಣೆ ಕಂಡುಬಂದಿದೆ. ಅಂಜನಪ್ಪ ಕಳುಹಿಸಿದ ಮಾಹಿತಿಗೂ ಇ-ಮೇಲ್ ನಲ್ಲಿರುವ ಮಾಹಿತಿಗೂ ತುಂಬಾ ವ್ಯತ್ಯಾಸ ಕಂಡುಬಂದಿದೆ.

 ಉತ್ತರಪ್ರದೇಶದ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಅವರ ಖಾತೆಯಿರುವುದಾಗಿ ಸಿಐಡಿ  ಅಧಿಕಾರಿಗಳು  ತಿಳಿಸಿದ್ದಾರೆ.  ಅವರ ಇ-ಮೇಲ್ ಐಡಿಯೂ ಹ್ಯಾಕ್ ಆಗಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.


ಅಂಜಿನಪ್ಪ ಈ ಮೇಲ್ ಕಳುಹಿಸಿದ ನಂತರ ಕೇಂದ್ರ ಕಚೇರಿಗೆ ಕರೆ ಮಾಡಿ ಹಣ ವರ್ಗಾವಣೆ ಕುರಿತು ಮಾಹಿತಿ ನೀಡಿದರು. ಅವರ ಹಣದ ಮೊತ್ತವಷ್ಟೇ ಹೇಳಿದ್ದರು. ಆದರೆ. ಖಾತೆದಾರರ ಮಾಹಿತಿ ತಿಳಿಸಲಿಲ್ಲ ಎಂದು ಬ್ಯಾಂಕಿನ ಜನರಲ್ ಮ್ಯಾನೇಜರ್ ಶಂಕರಪ್ಪ ಹೇಳಿದ್ದಾರೆ.


 ವಾರದಲ್ಲಿ ಇಂತಹ ಮೂರು ಪ್ರಕರಣಗಳು ನಡೆದಿದ್ದು, 22,15 ಲಕ್ಷ ಹಣ ವಂಚನೆಯಾಗಿದೆ.  ಈ ಹಿಂದಿನ ಎರಡೂ ಪ್ರಕರಣಗಳಲ್ಲಿ  ಸಿಬ್ಬಂದಿಗಳ ಎಚ್ಚರಿಕೆಯಿಂದಾಗಿ  ಕೈ ತಪ್ಪಲಿದ್ದ 29.20 ಲಕ್ಷ ಹಣವನ್ನು ರಕ್ಷಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆ ಖಾತೆಯನ್ನು ರದ್ದುಗೊಳಿಸಿದ್ದು, ಲಖನೌದಲ್ಲಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com