ಸುಪ್ರೀಂಕೋರ್ಟ್ ತೀರ್ಪಿನ ನಂತರ ಗುರುತಿನ ಪತ್ರದೊಂದಿಗೆ ಆಧಾರ್ ಜೋಡಣೆ- ಓಂ ಪ್ರಕಾಶ್ ರಾವತ್

ಸುಪ್ರೀಂಕೋರ್ಟ್ ತೀರ್ಪಿನ ನಂತರ ಚುನಾವಣಾ ಆಯೋಗ ಗುರುತಿನ ಪತ್ರದೊಂದಿಗೆ ಆಧಾರ್ ಕಾರ್ಡ್ ಜೋಡಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಹೇಳಿದ್ದಾರೆ.
ಓಂ ಪ್ರಕಾಶ್ ರಾವತ್
ಓಂ ಪ್ರಕಾಶ್ ರಾವತ್

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನ ನಂತರ ಚುನಾವಣಾ ಆಯೋಗ ಗುರುತಿನ ಪತ್ರದೊಂದಿಗೆ ಆಧಾರ್ ಕಾರ್ಡ್ ಜೋಡಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಹೇಳಿದ್ದಾರೆ.

ಬೆಂಗಳೂರಿನ ಐಐಎಂನಲ್ಲಿ ನಡೆದ ಚುನಾವಣಾಧಿಕಾರಿ ಮತ್ತು ರಾಜಕೀಯ ಸುಧಾರಣೆ ಕುರಿತ 14 ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು, ಚುನಾವಣಾ ಆಯೋಗ ಎದುರಿಸುವ ಅನೇಕ ಸಮಸ್ಯೆಗಳನ್ನು  ಹಂಚಿಕೊಂಡರು.

ತನ್ನ ಶಿಫಾರಸ್ಸುಗಳನ್ನು ಸರ್ಕಾರ ಯಾವ ರೀತಿ ಅನುಷ್ಠಾನಗೊಳಿಸುವ ಮೂಲಕ ಸುಧಾರಣೆ ತರಬಹುದು ಎಂಬ ಬಗ್ಗೆ ಸಲಹೆ ನೀಡಿದರು.

ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡುವ ಕಾರ್ಯವನ್ನು 205ರಲ್ಲಿ ನಿಲ್ಲಿಸಲಾಗಿತ್ತು. ಆದರೆ ನಂತರ 87.50 ಕೋಟಿ ಮತದಾರರ 32 ಕೋಟಿ ಗುರುತಿನ ಪತ್ರವನ್ನು  ಜೋಡಣೆ ಮಾಡಲಾಗಿದೆ. ಉಳಿದಿರುವ 54 ಕೋಟಿ ಮತದಾರರ ಗುರುತಿನ ಪತ್ರ ಹಾಗೂ ಆಧಾರ್ ಜೋಡಣೆಯನ್ನು ಶೀಘ್ರದಲ್ಲಿಯೇ  ಪೂರ್ಣಗೊಳಿಸಲಾಗುವುದು ಎಂದರು.

ಗಂಭೀರ ರೀತಿಯ ಅಪರಾಧ ಪ್ರಕರಣ ಎದುರಿಸುತ್ತಿರುವ ಅಭ್ಯರ್ಥಿಯ ನೋಂದಣಿ ರದ್ದುಗೊಳಿಸಲು ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದೆ. ಅಲ್ಲದೇ ಚುನಾವಣೆಗಾಗಿ ಮಾಡಬೇಕಿದ ಖರ್ಚಿನ ಮೊತ್ತವನ್ನು ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com