ಹೊಸ ನೀರಿನ ದರ ಪ್ರಸ್ತಾವದಿಂದ ಹಿಂದೆ ಸರಿಯುವಂತೆ ಬಿಡಬ್ಲ್ಯೂಎಸ್ ಎಸ್ ಬಿಗೆ ರಾಜ್ಯಸರ್ಕಾರ ಸೂಚನೆ

ಹೊಸ ನೀರಿನ ದರ ಪ್ರಸ್ತಾವದಿಂದ ಹಿಂದೆ ಸರಿಯುವಂತೆ ಬಿಡಬ್ಲ್ಯೂಎಸ್ ಎಸ್ ಬಿಗೆ ರಾಜ್ಯಸರ್ಕಾರ ಸೂಚಿಸಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನೀರಿನ ದರ ಪರಿಷ್ಕರಿಸದೆ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುವಂತೆ ಸೂಚನೆ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು :  ಹೊಸ ನೀರಿನ ದರ ಪ್ರಸ್ತಾವದಿಂದ ಹಿಂದೆ ಸರಿಯುವಂತೆ ಬಿಡಬ್ಲ್ಯೂಎಸ್ ಎಸ್ ಬಿಗೆ ರಾಜ್ಯಸರ್ಕಾರ ಸೂಚಿಸಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನೀರಿನ ದರ ಪರಿಷ್ಕರಿಸದೆ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುವಂತೆ ಸೂಚನೆ ನೀಡಲಾಗಿದೆ.

 ಇತ್ತೀಚಿಗೆ ವಿಧಾನಸೌಧದಲ್ಲಿ ನಡೆದ ಬಿಡಬ್ಲ್ಯೂಎಸ್ ಎಸ್ ಬಿ ಹಾಗೂ ಸರ್ಕಾರದ ಪ್ರತಿನಿಧಿಗಳ ನಡುವಿನ ಸಭೆಯಲ್ಲಿ ಈ ರೀತಿಯ ಸಲಹೆ ನೀಡಲಾಗಿದೆ.

ನೀರಿನ ವಿಷಯದಲ್ಲಿ ಸಾರ್ವಜನಿಕರ ಸಾಮಾಜಿಕ ಮೌಲ್ಯವೂ ಇರುವುದರಿಂದ  ದರ ಹೆಚ್ಚಿನ ಬದಲು ಪರ್ಯಾಯ ಮಾರ್ಗ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರತಿಐದುವರ್ಷಕ್ಕೊಮ್ಮೆ ನೀರಿನ ದರ ಹೆಚ್ಚಿಸಲು ಅನುಮತಿ ನೀಡಲಾಗಿದೆ.

2017 ಅಕ್ಟೋಬರ್ ನಲ್ಲಿ ಹೊಸ  ನೀತಿ ರಚಿಸಿದ್ದ ಬಿಡಬ್ಲ್ಯೂಎಸ್ ಎಸ್ ಬಿ ರಾಜ್ಯಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿತ್ತು. 2014 ನವೆಂಬರ್ 2 ರ ನಂತರ ಸುಮಾರು 9 ವರ್ಷಗಳ ಬಳಿಕ ನೀರಿನ ದರ ಪರಿಷ್ಕರಣೆಗೆ ಬಿಡಬ್ಲ್ಯೂಎಸ್ ಎಸ್ ಬಿ ಮುಂದಾಗಿತ್ತು.

 ರಾಜ್ಯದಲ್ಲಿ ಎರಡು ವಿದ್ಯುತ್ ಇಲಾಖೆಗಳು ವಿದ್ಯುತ್ ದರವನ್ನು ಹೆಚ್ಚಿಸಿವೆ ಆದರೆ, ನೀರಿನ ದರ ಪರಿಷ್ಕರಣೆಯಿಲ್ಲದೆ ಆದಾಯದಲ್ಲಿ ನಷ್ಟ ಅನುಭವಿಸುವಂತಾಗಿದೆ ಎಂದು ಬಿಡಬ್ಲ್ಯೂಎಸ್ ಎಸ್ ಬಿ ಅಧಿಕಾರಿಗಳು ಹೇಳಿದ್ದಾರೆ.

ತೊರೆಕಾಡನಹಳ್ಳಿಯಿಂದ ಬೆಂಗಳೂರಿಗೆ ನೀರು ಪೂರೈಕೆಗಾಗಿ ಕೆಪಿಟಿಸಿಎಲ್ ಹಾಗೂ ಸಿಇಎಸ್ ಸಿಗೆ ಪ್ರತಿ ತಿಂಗಳು 33 ರಿಂದ 36 ಕೋಟಿ ರೂ. ಪಾವತಿಸಲಾಗುತ್ತಿದೆ. ಬಂದ ಆದಾಯದಲ್ಲಿ ಇದಕ್ಕೆ ಅರ್ಧ ವೆಚ್ಚವಾಗುತ್ತಿದೆ.

ಆದಾಗ್ಯೂ ಅಂತಿಮ ಕರಡು ಸಲ್ಲಿಸುವ ಮುನ್ನ ಸಾರ್ವಜನಿಕರನ್ನು ಮನವೊಲಿಸುವಂತೆ ಸರ್ಕಾರ ಸಲಹೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com