ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ತಡೆ ಮುಂದುವರಿಕೆ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ(ಸಿಎಟಿ) ನೀಡಿರುವ ತಡೆಯಾಜ್ಞೆ ಇದೇ ತಿಂಗಳ 21ರ ವರೆಗೆ ಮುಂದುವರಿಯಲಿದೆ.
ರೋಹಿಣಿ ಸಿಂಧೂರಿ (ಸಂಗ್ರಹ ಚಿತ್ರ)
ರೋಹಿಣಿ ಸಿಂಧೂರಿ (ಸಂಗ್ರಹ ಚಿತ್ರ)

ಬೆಂಗಳೂರು: ಹಾಸನ  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ(ಸಿಎಟಿ) ನೀಡಿರುವ ತಡೆಯಾಜ್ಞೆ ಇದೇ ತಿಂಗಳ 21ರ ವರೆಗೆ ಮುಂದುವರಿಯಲಿದೆ.

ಪ್ರಕರಣಕ್ಕೆ ಸಂಬಂಧಿಸಿದ ಆದೇಶವನ್ನು ಸಿಎಟಿ ಮಾರ್ಚ್‌ 21ಕ್ಕೆ ಕಾಯ್ದರಿಸಿದೆ.

ಅವಧಿಗೂ ಮುನ್ನ  ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ರೋಹಿಣಿ ಮಾರ್ಚ್ 8 ರಂದು ಸಿಎಟಿ ಮೊರೆ ಹೋಗಿದ್ದರು. ರಾಜ್ಯ ಸರ್ಕಾರದ ಆದೇಶಕ್ಕೆ ಸಿಎಟಿ ಮಾರ್ಚ್‌ 13ರ ವರೆಗೆ ತಡೆ ನೀಡಿತ್ತು.

ಮತ್ತೊಂದೆಡೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ವರ್ಗಾವಣೆಗೂ ಸಿಎಟಿ ತಡೆ ನೀಡಿದೆ. ತಮ್ಮ ದಿಢೀರ್  ವರ್ಗಾವಣೆ ಪ್ರಶ್ನಿಸಿ ಅನೂಪ್ ಶೆಟ್ಟಿ, ಕೇಂದ್ರಿಯ ಆಡಳಿತಾತ್ಮಕ  ನ್ಯಾಯಮಂಡಳಿ ಮೊರೆ ಹೋಗಿದ್ದರು.

 ಒಂದು ವರ್ಷಕ್ಕೂ ಮುನ್ನ ವರ್ಗಾವಣೆ ಮಾಡಲಾಗಿದೆ. ಇದು ನಿಯಮಬಾಹಿರ ಎಂದು  ಅನೂಪ್ ಶೆಟ್ಟಿ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅನೂಪ್ ವರ್ಗಾವಣೆಗೆ ನ್ಯಾಯಮಂಡಳಿ ತಡೆ ನೀಡಿದ್ದು, ಮಾರ್ಚ್ 22 ರಂದು ಮುಂದಿನ ವಿಚಾರಣೆ ನಡೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com