ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14ಕ್ಕೂ ಹೆಚ್ಚು ಅತ್ಯಾಧುನಿಕ ಸರಕು ಪರಿಶೀಲನಾ ಯಂತ್ರ

ಪ್ರಯಾಣಿಕರ ಸರಕು ಪರಿಶೀಲನೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14ಕ್ಕೂ ಹೆಚ್ಚು ಸ್ವಯಂ ಚಾಲಿತ ಪರಿಶೀಲನಾ ಯಂತ್ರಗಳನ್ನು ಅಳವಡಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಪ್ರಯಾಣಿಕರ ಸರಕು  ಪರಿಶೀಲನೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14ಕ್ಕೂ ಹೆಚ್ಚು ಸ್ವಯಂ ಚಾಲಿತ ಪರಿಶೀಲನಾ ಯಂತ್ರಗಳನ್ನು ಅಳವಡಿಸಲಾಗುತ್ತಿದೆ.

ಈಗಾಗಲೇ ಇಂತಹ ಎರಡು ಯಂತ್ರಗಳು ಈ ವಿಮಾನ ನಿಲ್ದಾಣದಲ್ಲಿವೆ. ಇಂತಹ ವ್ಯವಸ್ಥೆ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಇದಾಗಿದೆ. 2017 ಮೇ ತಿಂಗಳಲ್ಲಿ ಇದನ್ನು ಪರಿಚಯಿಸಲಾಗಿದ್ದು,  350ರಿಂದ 40 ರೂ ಧರದ ಬ್ಯಾಗ್ ನ್ನು ಪ್ರತಿ ಗಂಟೆಯೂ ಪರಿಶೀಲನೆ ನಡೆಸಲಿದೆ.

 ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ದಿನನಿತ್ಯ ಕಾರ್ಯನಿರ್ವಹಣೆ ವಿಭಾಗದ ಜನರಲ್ ಮ್ಯಾನೇಜರ್  ಎಸ್. ವಿ. ಅರುಣಾಚಲಂ, ಮುಂದಿನ 18 ತಿಂಗಳೊಳಗೆ 14ಕ್ಕೂ ಹೆಚ್ಚು ಇಂತಹ ಯಂತ್ರಗಳನ್ನು ಅಳವಡಿಸಲಾಗುವುದು. ಇಂಗ್ಲೆಂಡ್ ನಿಂದ ಇಂತಹ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಮಾನವರ ಹಸ್ತಕ್ಷೇಪ ಕಡಿಮೆಯಾಗಲಿದೆ  ಎಂದು ತಿಳಿಸಿದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com