ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳಿಂದ 93 ಲಕ್ಷ ಮೌಲ್ಯದ ಚಿನ್ನ ವಶ, ನಾಲ್ವರ ಬಂಧನ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕಳೆದ ನಾಲ್ಕು ದಿನಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕಳೆದ ನಾಲ್ಕು ದಿನಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಂಡ 93 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ದುಬೈನಿಂದ ಆಗಮಿಸಿದ್ದ ನಲಕಾಮ್ ಪರಂಬ ಮೊಹಮ್ಮದ್ ರಫೀಕ್ (27) ಎನ್ನುವವರಿಂದ 22.80 ಲಕ್ಷ ರೂಪಾಯಿ ಮೌಲ್ಯದ 728 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದೇ ಬಗೆಯಲ್ಲಿ ಮಂಗಳವಾರ ಶಾರ್ಜಾದಿಂದ ಬೆಂಗಳೂರಿಗೆ ಆಗಮಿಸಿದ್ದ ಮುಸ್ತಫಾ ಪಳ್ಳಿಪುರಲ್ (38) ನಿಂದ ರೂ 31.46 ಲಕ್ಷ ಮೌಲ್ಯದ 1003.56 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಘಟನೆಯಲ್ಲಿ ಅದೇ ದಿನ ದುಬೈ ನಿಂದ ಆಗಮಿಸಿದ್ದ ಜಮಾಲುದೀನ್ (40) ನಿಂದ 31.35 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಿನ್ನಾಭರಣ ಕಳ್ಳಸಾಗಣೆ ನಡೆಸಿದ ಆರೋಪದ ಮೇಲೆ ಕೋಳಿಕ್ಕೋಡ್ ಮೂಲದ ಶಂಶುದ್ದೀನ್(34) ನನ್ನು ಭಾನುವಾರ ಬಂಧಿಸಿರುವ ಕಸ್ಟಮ್ ಅಧಿಕಾರಿಗಳು 6.80 ಲಕ್ಷ ಮೌಲ್ಯದ 217 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

