ಅವರೇನೂ ಸುಪ್ರೀಂ ಅಲ್ಲ ? ವೀರಶೈವ ಮಹಾಸಭಾ ವಿರುದ್ಧ ಸಚಿವ ಎಂ. ಬಿ. ಪಾಟೀಲ್ ವಾಗ್ದಾಳಿ

ಲಿಂಗಾಯತ ಮತ್ತು ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಂಬಂಧ ಅಖಿಲ ಭಾರತ ಮಹಾಸಭಾ ಕೈಗೊಂಡಿರುವ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ಎಂ. ಬಿ. ಪಾಟೀಲ್
ಎಂ. ಬಿ. ಪಾಟೀಲ್

ಬೆಂಗಳೂರು : ಲಿಂಗಾಯತ ಮತ್ತು ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಂಬಂಧ ಅಖಿಲ ಭಾರತ ಮಹಾಸಭಾ ಕೈಗೊಂಡಿರುವ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ವೀರಶೈವ ಮಹಾಸಭಾ ಕಾರ್ಯಕಾರಿ ಸಮಿತಿ ನಿರ್ಣಯ ಕುರಿತು ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಪಾಲ್ಗೊಂಡಿದ್ದವರು ಲಿಂಗಾಯಿತರಲ್ಲ, ಅವರು ವೀರಶೈವರು, ಅವರೇನೂ ಸುಪ್ರೀಂ ಅಲ್ಲ, ಹಾಗೇನಾದರೂ ಆಗಿದ್ದಲ್ಲಿ, ವಚನ ಸಾಹಿತ್ಯ ಓದಲಿ, ಲಿಂಗಾಯತ  ಸ್ಥಾಪಕ ಬಸವಣ್ಣನ  ಚಿಂತನೆಗಳನ್ನು ಅರಿಯಲಿ ಎಂದರು.

ಲಿಂಗಾಯತ ಹಾಗೂ ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ  ಶಿಫಾರಸ್ಸು ಮಾಡುವ ನಿರ್ಧಾರದಲ್ಲಿ ಬದಲಾವಣೆ  ಇಲ್ಲ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com