150 ಮಿಲಿಯನ್ ದಾಟಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇ 2008 ರಂದು ಆರಂಭಗೊಂಡಾಗಿನಿಂದ 2018 ಮಾರ್ಚ್ 25 ರವರೆಗೂ 150 ಮಿಲಿಯನ್ ಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇ 2008 ರಂದು  ಆರಂಭಗೊಂಡಾಗಿನಿಂದ 2018  ಮಾರ್ಚ್ 25 ರವರೆಗೂ  150 ಮಿಲಿಯನ್ ಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಪ್ರತಿವರ್ಷ ವಿಮಾನ ನಿಲ್ದಾಣಕ್ಕೆ ಬರುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 13 ರಷ್ಟು ಹೆಚ್ಚಳವಾಗುತ್ತಿದ್ದು, ಡಿಸೆಂಬರ್ 19. 2012ರಿಂದಲೂ  1.671 ದಿನಗಳಲ್ಲಿ 50 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಈ ವಿಮಾನ ನಿಲ್ದಾಣ ದಕ್ಷಿಣ ಭಾರತದ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು,
ದಾಖಲೆಯ 25. 04 ಮಿಲಿಯನ್ ಪ್ರಯಾಣಿಕರು ಬಳಸಿದ್ದಾರೆ. ಇದರಿಂದಾಗಿ ವಾಯುಮಾಲಿನ್ಯ ಶೇ.4.3 ರಷ್ಟು ಹೆಚ್ಚಾಗಿದೆ.

ಆರ್ಥಿಕವಾಗಿ ಬೆಳವಣಿಗೆಯಾಗುತ್ತಿರುವ ಬೆಂಗಳೂರು ನಗರದ ಮೇಲೆ ಇದರ ಪರಿಣಾಮ ಉಂಟಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಭಾರೀ  ಹೆಚ್ಚಳವಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ, ಹರಿಮಾರರ್ ತಿಳಿಸಿದ್ದಾರೆ.

 ಬೇಸಿಗೆ ಕಾಲದ ವಿಮಾನಗಳ ಹಾರಾಟವನ್ನು ನಿನ್ನೆ ಘೋಷಿಸಲಾಗಿದ್ದು, ಜಾಗತಿಕ ಗಲ್ಪ್ ಏರ್  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮೇ 1 ರಿಂದ ಬರ್ಹೇನ್ ಗೆ ಪ್ರತಿನಿತ್ಯ ವಿಮಾನ ಸೇವೆ ಒದಗಿಸಲಿದೆ ಎಂದು ಹೇಳಲಾಗಿದೆ.

ಈ ಮೂಲಕ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇರೆ ಬೇರೆ ದೇಶ ಸಂಪರ್ಕಿಸುವ ವಿಮಾನ ಸಂಖ್ಯೆಯಲ್ಲಿ ಹೆಚ್ಚುವರಿಯಾಗಿ 22 ಸೇರಿವೆ. ವಡೋದ್ದಾರ, ಮತ್ತು ಜಮ್ಮು ಹೊಸ ಮಾರ್ಗ ಸೇರಿದಂತೆ 47 ದೇಶಿಯ ವಿಮಾನ ಹಾರಾಟ ನಡೆಸಲಿವೆ

. ಈ ವರ್ಷದ ಬೇಸಿಗೆ ತಿಂಗಳಲ್ಲಿ ಒಟ್ಟು 75 ಅಂತಾರಾಷ್ಟ್ರೀಯ ಮತ್ತು 591 ದೇಶಿಕ ವಿಮಾನ ನಿಲ್ದಾಣಗಳು ಹಾರಾಟ ನಡೆಸಲಿವೆ ಎಂದು ಮಾಹಿತಿ ನೀಡಲಾಗಿದೆ.






ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com