ರಾಯಚೂರು-ಮಂಗಳೂರು ಆರ್ಥಿಕ ಕಾರಿಡಾರ್ ಗೆ 60 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯ

ಮಂಗಳೂರು- ರಾಯಚೂರು ನಡುವಣ ಆರ್ಥಿಕ ಕಾರಿಡಾರ್ ನಿರ್ಮಾಣ ಸಂಬಂಧ ವಿಸ್ತೃತಾ ಯೋಜನಾ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧಪಡಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ಮಂಗಳೂರು- ರಾಯಚೂರು ನಡುವಣ ಆರ್ಥಿಕ ಕಾರಿಡಾರ್ ನಿರ್ಮಾಣ  ಸಂಬಂಧ ವಿಸ್ತೃತಾ ಯೋಜನಾ ವರದಿಯನ್ನು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧಪಡಿಸುತ್ತಿದೆ.

ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿಯ ಭಾರತ ಮಾಲಾ ಯೋಜನೆ ಭಾಗವಾಗಿ ಈ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿ 15 ಕಿಲೋಮೀಟರ್ ದೂರ ತಿರುವುಗಳನ್ನು ಹೊಂದಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಯೋಜನಾ ನಿರ್ದೇಶಕ ಸೋಮಶೇಖರ್  ಪ್ರಕಾರ , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮೂಡಿಗೆರೆ ಮತ್ತು ನೆಲ್ಯಾಡಿ ಮಧ್ಯದಲ್ಲಿ ಸುಮಾರು 60 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ.

ಕೇಂದ್ರ ಸರ್ಕಾರ ಉದ್ದೇಶಿಸಿರುವ ಮಂಗಳೂರು- ರಾಯಚೂರು, ಮಂಗಳೂರು , ಚಿತ್ರದುರ್ಗ, ಬಳ್ಳಾರಿ- ರಾಯಚೂರು ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಈ 60 ಹೆಕ್ಟರ್ ಮಾತ್ರವಲ್ಲದೆ, ಎಸ್ಟೇಟ್ ಮಾಲೀಕರು, ಮತ್ತಿತರ ಖಾಸಗಿ ಭೂ ಮಾಲೀಕರಿಂದ ಸಣ್ಣ ಪ್ರಮಾಣದ ಭೂಮಿಯ ಅಗತ್ಯವಿದೆ.

ಮೂಡಿಗೆರೆ ಬಳಿ ಭೈರವೇಶ್ವರ ಹಾಗೂ ನೇಲ್ಯಾಡಿ ಬಳಿ ಶಿಶೈಲೇಶ್ವರ ದೇವಾಲಯಗಳಿದ್ದು, ಮೂಡಿಗೆರೆ ಹಾಗೂ ನೇಲ್ಯಾಡಿಯನ್ನು ಸಂಪರ್ಕಿಸುವ ಸ್ಥಳಗಳಾಗಿವೆ. ಇದೇ ರೀತಿಯಲ್ಲಿ ವಿಸ್ತೃತಾ ಯೋಜನಾ ವರದಿ ಸಿದ್ಧವಾಗಿದೆ.

ಬೈರವೇಶ್ವರ ಮತ್ತು ಶಿಶೈಲ್ವೇಶವ ನಡುವೆ ಸುಮಾರು 15 ಕಿಲೋ ಮೀಟರ್ ದೂರದ ಆರು ಪಥದ ರಸ್ತೆ ನಿರ್ಮಾಣವಾಗಲಿದ್ದು, ಪಶ್ಟಿಮ ಘಟ್ಟದ ಕೆಲ ಪ್ರದೇಶವೂ ಇದರಲ್ಲಿ ಸೇರಲಿದೆ. ಈ ಯೋಜನೆಗಾಗಿ 60 ಹೆಕ್ಟೇರ್ ಅರಣ್ಯ ಭೂಮಿಯ ಅಗತ್ಯವಿದೆ ಎಂಬುದಾಗಿ ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ನೇಲ್ಯಾಡಿಯಿಂದ ಬಂಟ್ವಾಳ ಮಾರ್ಗವಾಗಿ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟಕ್ಕೆ ತಕ್ಕಂತೆ ರಸ್ತೆ ನಿರ್ಮಿಸಲಾಗುತ್ತಿದ್ದು, ಅರಣ್ಯ ಇಲಾಖೆಯಿಂದ ಸ್ಪಷ್ಟನೆ ದೊರೆತು ವಿಸ್ತೃತ ಯೋಜನಾ ವರದಿ ಅನುಮೋದನೆಗೊಂಡರೆ, ಮೂಡಿಗೆರೆಯಿಂದ ಹಾಸನ ಮಾರ್ಗದ ಹೊಸ ಯೋಜನೆ ಪ್ರಸ್ತಾವಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮತ್ತೊಂದು ಯೋಜನೆ ಚಿತ್ರದುರ್ಗದಿಂದ ರಾಯಚೂರು ಮಾರ್ಗಕ್ಕೆ ಪ್ರತ್ಯೇಕ ವಿಸ್ತೃತ ಯೋಜನೆ ತಯಾರಿಸಲಾಗುವುದು ಎಂದು ಯೋಜನಾ ನಿರ್ದೇಶಕ ಅಜಯ್ ಮಾನಿ ಕುಮಾರ್  ತಿಳಿಸಿದ್ದಾರೆ.

 ಇದರಿಂದಾಗಿ ಮಂಗಳೂರಿನಿಂದ ಪ್ರಯಾಣಿಸುವ ಪ್ರಯಾಣಿಕರು. ಮಂಗಳೂರು, ಬಂಟ್ವಾಳ, ನೆಲ್ಯಾಡಿ, ಮೂಡಿಗೆರೆ, ಕಡೂರು. ಹುಳಿಯಾರ್, ಹಿರಿಯೂರು, ಚಳ್ಳಕೆರೆ, ಬಳ್ಳಾರಿ, ಅದೋನಿ ಮಾರ್ಗವಾಗಿ ರಾಯಚೂರಿನ ಮಂತ್ರಾಲಯ ತಲುಪಬಹುದಾಗಿದೆ.

ಈ ಎಲ್ಲಾ ರಸ್ತೆಗಳನ್ನು ಆರ್ಥಿಕ ಕಾರಿಡಾರ್ ನಲ್ಲಿ ಮೇಲ್ದರ್ಜೇರಿಸಲಾಗುತ್ತಿದೆ ಎಂದು ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ವಿ. ಗಿರೀಶ್ ಹೇಳಿದ್ದಾರೆ.

ಸುಬ್ರಮಣ್ಯ, ಚಾರ್ಮಡಿ, ಶಿರಡಿ, ಕುದುರೆಮುಖ ಮತ್ತು ಅಗುಂಬೆ ಸಂಪರ್ಕಿಸುವ ಮಾರ್ಗಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಆದರೆ, ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ. ಇವುಗಳನ್ನು ಯಾವಾಗಲೂ ದುರಸ್ತಿ ಮಾಡಲಾಗುತ್ತಿರುತ್ತದೆ ಎಂದು ಸರ್ಕಾರ ಹೇಳಿದೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com