ಬೆಂಗಳೂರು: ಎನ್’ಆರ್’ಐಗಳಿಗೆ ವಂಚನೆ, ರಿಯಲ್ ಎಸ್ಟೇಟ್ ಏಜೆಂಟ್ ಬಂಧನ

ಅನಿವಾಸಿ ಭಾರತೀಯರಿಗೆ ಕೋಟಿ ಕೋಟಿ ವಂಚಿಸಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಓರ್ವನನ್ನು ಪೋಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಎನ್’ಆರ್’ಐಗಳಿಗೆ ವಂಚನೆ, ರಿಯಲ್ ಎಸ್ಟೇಟ್ ಏಜೆಂಟ್ ಬಂಧನ
ಬೆಂಗಳೂರು: ಎನ್’ಆರ್’ಐಗಳಿಗೆ ವಂಚನೆ, ರಿಯಲ್ ಎಸ್ಟೇಟ್ ಏಜೆಂಟ್ ಬಂಧನ
ಬೆಂಗಳೂರು: ಅನಿವಾಸಿ ಭಾರತೀಯರಿಗೆ ಕೋಟಿ ಕೋಟಿ ವಂಚಿಸಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಓರ್ವನನ್ನು ಪೋಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂನ 15ನೆ ಅಡ್ಡರಸ್ತೆ ನಿವಾಸಿ, ರಿಯಲ್ ಎಸ್ಟೇಟ್ ಏಜೆಂಟ್ ಗಣೇಶ್ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಈತ ಅನಿವಾಸಿ ಭಾರತೀಯ ರಾಜೇಶ್ ರಾಮಚಂದ್ರನ್ ಎನ್ನುವವರಿಗೆ 12 ಕೋಟಿ ರೂ. ವಂಚಿಸಿದ್ದನೆಂದು ಪೋಲೀಸರು ಹೇಳಿದ್ದಾರೆ.
 ರಾಮಚಂದ್ರನ್ ತಾವು ವಂಚನೆಗೊಳಗಾದ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.ಒಟ್ಟಾರೆ ಎರಡು ದೂರು ದಾಖಲಾಗಿದ್ದು ಒಂದರಲ್ಲಿ ಗಣೇಶ್ ವಿರುದ್ಧ ಆರೊಪ ಮಾಡಿದ್ದರೆ ಇನ್ನೊಂದರಲ್ಲಿ ಗಣೇಶ್ ಹಾಗೂ ಆತನ ಪತ್ನಿಯ ವಿರುದ್ಧ ವಂಚನೆ ಆರೋಪ ಮಾಡಲಾಗಿದೆ. 
ಭಾರೀ ಮೊತ್ತದ ವಂಚನೆ ಪ್ರಕರಣ ಇದಾಗಿದ್ದ ಕಾರಣ ತನಿಖೆಗಾಗಿ ಸಿಸಿಬಿ ಪೋಲೀಸರು ಕಾರ್ಯಪ್ರವೃತ್ತರಾಗಿದ್ದರು. ಇದೀಗ ಗಣೇಶ್ ಬಂಧಿತನಾಗಿದ್ದು ಆತನ ಪತ್ನಿ  ಶ್ರೀಲತಾ ಅವರನ್ನು ಸಹ ವಿಚಾರಣೆ ನಡೆಸಲಾಗುತ್ತದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. 
ಬಹುಕಾಲದಿಂದ ದುಬೈನಲ್ಲಿ ನೆಲೆಸಿದ್ದ ರಾಜೇಶ್ ರಾಮಚಂದ್ರನ್ ಗೆ ಗಣೇಶ್‍ ಪರಿಚಯವಾಗಿದ್ದು ಆತ ಅವರಿಗೆ ತನ್ನ ಸಂಸ್ಥೆಗೆ ಪಾಲುದಾರರಾಗಲು ಕೇಳಿದ್ದಾನೆ. ಹೂಡಿಕೆ ಮಾಡಿದ ಹಣಕ್ಕೆ ಭಾರೀ ಲಾಭ ಸಿಗುವುದಾಗಿ ನಂಬಿಸಿದ್ದಾನೆ. ಇದಕ್ಕೆ ಒಪ್ಪಿಗೆಯಿತ್ತ ರಾಮಚಂದ್ರನ್ ಸಂಸ್ಥೆಯ ಪಾಲುದಾರಿಕೆಗಾಗಿ  6.63 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಆ ಹಣವನ್ನು ಹಿಂತಿರುಗಿಸದ ಣೇಶ್ ಮತ್ತು ಈತನ ಪತ್ನಿ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರಿತ್ತಿದ್ದಾರೆ.  ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರಕಿಸುವುದಾಗಿ ನಂಬಿಸಿ 6.44 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ನಮಗೆ ವಂಚನೆ ಮಾಡಿದ್ದಾರೆಂದು ಇನ್ನೊಂದು ದೂರಿನಲ್ಲಿ ವಿವರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com