ಬೆಂಗಳೂರು: ಹಿರಿಯ ಅಧಿಕಾರಿಗಳ ಕಿರುಕುಳದಿಂದ ನೊಂದು ಉದ್ಯೋಗಿ ಆತ್ಮಹತ್ಯೆ

ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:  ಖಾಸಗಿ ಏಜೆನ್ಸಿಯಲ್ಲಿ  ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
31 ವರ್ಷದ ಕಲ್ಲೇಶ ಗೌಡ ಎಂಬಾತ ಕಾಮಾಕ್ಷಿಪಾಳ್ಯದ ಪಟ್ಟೆಗಾರಪಾಳ್ಯದ ಪಾರ್ಕ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ವ್ಯಕ್ತಿ ಬರೆದಿಟ್ಟ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಕಲ್ಲೇಶ್ ಗೌಡ ಕೆಲಸ ಮಾಡುತ್ತಿದ್ದ  ಎಟಿಎಂ ಗೆ ಹಣ ತುಂಬುವ ಏಜೆನ್ಸಿಯ  ಇಬ್ಬರು ಸಹೋದ್ಯೋಗಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ತುಮಕೂರು ನಿವಾಸಿಯಾದ ಕಲ್ಲೇಶ್ ಗೌಡ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಸಿಸುತ್ತಿದ್ದ. 
ಮಂಗಳವಾರದಿಂದ ಕಲ್ಲೇಶ್ ಗೌಡ ನಾಪತ್ತೆಯಾಗಿದ್ದ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆತನ ಪೋಷಕರು ದೂರು ದಾಖಲಿಸಿದ್ದರು, ಪಾರ್ಕ್ ನಲ್ಲಿ ಶವ ನೇತಾಡುತ್ತಿದ್ದುದ್ದನ್ನು ನೋಡಿದ ಸ್ಥಳೀಯರು,  ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು, ಕಲ್ಲೇಶ್ ಗೌಡ ಬರೆದಿರುವ ಡೆತ್ ನೋಟ್ ನಲ್ಲಿ, ಹಣಕಾಸಿನ ವಿಚಾರವಾಗಿ ಆತನ ಹಿರಿಯ ಸಹೋದ್ಯೋಗಿಗಳಾದ ರಾಜಶೇಖರ್ ಮತ್ತು ರಘುನಾಥ್ ಆತನಿಗೆ ಕಿರುಕುಳ ನೀಡುತ್ತಿದ್ದರು ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೊತೆಗೆ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಒಂಟಿಯಾಗಿ ಹೋಗುತ್ತಿರುವುದಕ್ಕೆ ಅವರ ಬಳಿ ಕ್ಷಮೆ ಕೋರಿದ್ದಾನೆ, ಡೆತ್ ನೋಟ್ ಆಧಾರದ ಮೇಲೆ ಇಬ್ಬರು ಸಹೋದ್ಯೋಗಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕಲ್ಲೇಶ್ ಗೌಡ ಎಟಿಎಂಗೆ ತುಂಬ ಬೇಕಿದ್ದ 30 ಲಕ್ಷ ರು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ತನಿಖೆ ಮಾಡುವಂತೆ ಏಜೆನ್ಸಿ ಸೂಚಿಸಿತ್ತು, ಎಕೆ ಎಟಿಎಂಗೆ ಹಣ ತುಂಬಲಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿತ್ತು. 
ಸೋಮವಾರದಿಂದ ಕೆಲಸಕ್ಕೆ ಬರುವುದನ್ನು ಕಲ್ಲೇಶ್ ಗೌಡ ನಿಲ್ಲಿಸಿದ್ದ,  ಕಾನೂನು ಹೋರಾಟಕ್ಕೆ ಎದುರಿದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ, ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com