ಈ ಬಾರಿಯ ಬೇಸಿಗೆಯಲ್ಲಿ 'ಕೂಲ್' ಆಗಿರಲಿದೆ ಬೆಂಗಳೂರು!

21 ನೇ ಶತಮಾನದ ಅತಿ ಹೆಚ್ಚಿನ ಉಷ್ಣಾಂಶ ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ದಾಖಲಾಗಿತ್ತು, ಬೇಸಿಗೆಯಲ್ಲಿ 37.2 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗಿತ್ತು......
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ವರ್ಷ  ಮಾರ್ಚ್ 26 ರ ವೇಳೆಗೆ ಬೆಂಗಳೂರಿನಲ್ಲಿ ದಾಖಲೆಯ ಉಷ್ಣಾಂಶ ದಾಖಲಾಗಿತ್ತು,  21 ನೇ ಶತಮಾನದ ಅತಿ ಹೆಚ್ಚಿನ ಉಷ್ಣಾಂಶ ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ದಾಖಲಾಗಿತ್ತು, ಬೇಸಿಗೆಯಲ್ಲಿ 37.2 ಡಿಗ್ರಿಯಷ್ಟು ತಾಪಮಾನ ಏರಿಕೆಯಾಗಿತ್ತು. 
ಆದರೆ ಈ ಬಾರಿ ಬೆಂಗಳೂರಿನಲ್ಲಿ ಬೇಸಿಗೆಯ ತಾಪ ಅಷ್ಟೊಂದು ಹೆಚ್ಚಿಗೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. 2017ರಲ್ಲಿ ಸಂಭವಿಸಿದ್ದ ದಾಖಲೆಯ ತಾಪಮಾನಕ್ಕಿಂತ ಈ ವರ್ಷ ಕಡಿಮೆ ಉಷ್ಣಾಂಶವಿರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಒಳನಾಡು ಕರ್ನಾಟಕದಲ್ಲಿ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಗರಿಷ್ಠ 0.68 ಡಿಗ್ರಿ ತಾಪಮಾನದ ನಿರೀಕ್ಷೆಯಿದ್ದು, ಹಾಗೆಯೇ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಗರಿಷ್ಠ 0.4 ಡಿಗ್ರಿ ತಾಪಮಾನ ಸಾಧ್ಯತೆಯಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಕಳೆದ ವರ್ಷದ ಬೇಸಿಗೆಯಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿತ್ತು, ಕಳೆದ ವರ್ಷಕ್ಕೆ ಹೋಲಿಸಿದರೇ ಈ ಬೇಸಿಗೆಯಲ್ಲಿ ತಾಪಮಾನ ಕಡಿಮೆಯಾಗಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದ  ತಾಪಮಾನ ಇರಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ, ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಬೆಂಗಳೂರು ಸ್ವಲ್ಪ ಮಟ್ಟಿಗೆ ತಂಪಾಗಿರಲಿದೆ, ಮಾರ್ಚ್ ತಿಂಗಳ ತಾಪಮಾನ ಅಧರಿಸಿ ಇದನ್ನು ಹೇಳಲಾಗುತ್ತಿದೆ ಎಂದು ಕರ್ನಾಟಕ ವಿಪತ್ತು ಪರಿಹಾರ ನಿರ್ವಹಣಾ ಕೇಂದ್ರದ ವಿಜ್ಞಾನಿ ಎಸ್ ಎಸ್ ಎಂ ಗವಾಸ್ಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com