ಮಕ್ಕಳ ವರ್ಗಾವಣೆ ಬಗ್ಗೆ ಮಾ.31ರೊಳಗೆ ತಿಳಿಸಿ, ಇಲ್ಲವೆ 10 ಸಾವಿರ ದಂಡ ಕಟ್ಟಿ: ಖಾಸಗಿ ಶಾಲೆಗಳಿಂದ ಪೋಷಕರಿಗೆ ಒತ್ತಡ

ಬೆಂಗಳೂರಿನ ಕೆಲ ಖಾಸಗಿ ಶಾಲೆಗಳು ಪೋಷಕರಿಂದ ಹಣ ಕೇಳಲು ಹೊಸ ಮಾರ್ಗವನ್ನು ಕಂಡುಕೊಂಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಬೆಂಗಳೂರಿನ ಕೆಲ ಖಾಸಗಿ ಶಾಲೆಗಳು ಪೋಷಕರಿಂದ ಹಣ ಕೇಳಲು ಹೊಸ ಮಾರ್ಗವನ್ನು ಕಂಡುಕೊಂಡಿವೆ. ಇಂತಹಾ ಶಾಲೆಗಳು ಮಕ್ಕಳಿಗೆ ವರ್ಗಾವಣೆ ಪತ್ರ (ಟಿಸಿ) ನೀಡುವುದಕ್ಕಾಗಿ ಹಣ ಕೇಳುತ್ತಿವೆ. ಮಾ.31ರ ಬಳಿಕ ಯಾವ ಪೋಷಕರು ಮಕ್ಕಳ ವರ್ಗಾವಣೆ ಪತ್ರಕ್ಕೆ ಬೇಡಿಕೆ ಇಟ್ಟರೆ ಅಂತಹವರಿಂದ ಈ ಶಾಲೆಗಳು 10,000 ರೂ. ವರೀಗೆ ಹಣ ಕೇಳುತ್ತಿದೆ. ಈ ಸಂಬಂಧ ಕೆಲವು ಪೋಷಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
"ನಾವು ನಮ್ಮ ಮಕ್ಕಳು ಓದುತ್ತಿರುವ ಶಾಲೆಯನ್ನು ಬಿಟ್ಟು ಬೇರೆ ಶಾಲೆಗೆ ಸೇರಿಸಲು ಯೋಜಿಸಿದರೆ ಶಾಲಾ ಆಡಳಿತಕ್ಕೆ ಮಾ.31 ರ ಮೊದಲು ತಿಳಿಸಬೇಕು, ವಿಫಲವಾದಲ್ಲಿ 10,000 ದಂಡವನ್ನು ಪಾವತಿಸಬೇಕು. ಎಂದು ಕೆಲ ಖಾಸಗಿ ಶಾಲೆಗಳು ಒತ್ತಾಯಿಸುತ್ತಿದೆ" ಪೋಷಕರು ಹೇಳಿದ್ದಾರೆ.
ಶಾಲೆಗಳು ಅನುಸರಿಸುತ್ತಿರುವ ಈ ಕ್ರಮ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ, ಕಾಯ್ದೆ ಪ್ರಕಾರ ಒಂದು ಮಗು ತಾನು ಕಲಿಯುತ್ತಿರುವ ಶಾಲೆ ಬಿಟ್ಟು ಬೇರೆ ಶಾಲೆಗೆ ಸೇರ್ಪಡೆಯಾಗುವ ನಿರ್ಧಾರಕ್ಕೆ ಬಂದಲ್ಲಿ ಅಂತಹಾ ಶಾಲಾ ಆಡಳಿತವು ಮಗುವಿನ ವರ್ಗಾವಣಾ ಪತ್ರವನ್ನು ನೇರವಾಗಿ ಆ ಮಗು ಯಾವ ಶಾಲೆಗೆ ಸೇರಿಕೊಳ್ಳಲಿದೆಯೋ ಅಂತಹಾ ಶಾಲೆಗೆ ವರ್ಗಾಯಿಸಬೇಕು. ಆದರೆ ಶಾಲೆಗಳು ರೂಪಿಸಿದ ನೂತನ ನಿಯಮದಿಂದ ಪೋಷಕರು ಇದೀಗ ಸಂದಿಗ್ದಕ್ಕೆ ಸಿಕ್ಕಿದ್ದಾರೆ. ಏಕೆಂದರೆ ಯಾವುದೇ ಪೋಷಕರು ಮಗುವಿನ ಪ್ರಸಕ್ತ ಶೈಕ್ಷಣಿಕ ವರ್ಷದ ಫಲಿತಾಂಶ ಬಂದ ಬಳಿಕವಷ್ಟೇ ಶಾಲಾ ಬದಲಾವಣೆಗೆ ನಿರ್ಧರಿಸುತ್ತಾರೆ. ಆದರೆ ಈ ಫಲಿತಾಂಶ ಏಪ್ರಿಲ್ ಮೊದಲ ವಾರಕ್ಕೂ ಮುನ್ನ ಲಭ್ಯವಾಗುವುದಿಲ್ಲ
ಎಕ್ಸ್ ಪ್ರೆಸ್ ಜತೆಗೆ ಮಾತನಾಡಿದ ಓರ್ವ ಪೋಷಕರು ಹೇಳುವಂತೆ "ನನ್ನ ಮಗಳು ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಯ ಫಲಿತಾಂಶ ಏ.7 ರಂದು ಘೋಷಣೆಯಾಗಲಿದೆ. ಆದರೆ ಶಾಲೆ ಆಡಳಿತ ಮಂಡಳಿಯವರು ನಾನೇನಾದರೂ ಮಗುವಿನ ಶಾಲೆ ಬದಲಿಸಲು ಬಯಸಿದಲ್ಲಿ ಅದನ್ನು ಮಾ.31 ರೊಳಗೆ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದೆ. ಆದರೆ ನನಗೆ ಶಾಲೆ ಬದಲಾವಣೆ ಕುರಿತು ಶಾಲಾ ಆಡಳಿತಕ್ಕೆ ತಿಳಿಸಲು ಹಿಂಜರಿಕೆ ಇದೆ. ಏಕೆಂದರೆ ಹಾಗೇನಾದರೂ ತಿಳಿಸಿದ್ದಾದರೆ ಅವರು ನನ್ನ ಮಗಳು ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕ ಗಳಿಸುತ್ತಿಲ್ಲ  ಹಾಗಾಗಿ ಶಾಲೆ ಬದಲಿಸುತ್ತಿದ್ದೀರಿ ಎನ್ನುವ ಸಂಭವವಿದೆ".
ನಗರದ ಪ್ರಖ್ಯಾತ ಖಾಸಗಿ ಶಾಲೆಯೊಂದು ಈ ಸಂಬಂಧ ಹೊರಡಿಸಿರುವ ಸುತ್ತೋಲೆ ಹೀಗಿದೆ- "ಇಂತಹಾ ಮಾಹಿತಿಯನ್ನು ಮುಂಚಿತವಾಗಿ ಪಡೆದುಕೊಳ್ಳುವುದರ ಹಿಂದೆ ನಾನಾ ಕಾರಣಗಳಿದೆ, ಅದರಲ್ಲಿ ಒಂದೆಂದರೆ ಪ್ರತಿ ವರ್ಷವೂ ಈ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ವಿದ್ಯಾರ್ಥಿಗಳ ಪ್ರವೇಶವಾಗುತ್ತದೆ. ಶೈಕ್ಷಣಿಕ ವರ್ಷಾಂತ್ಯದಲ್ಲಿ ಪೋಷಕರು ಅವನ’/ಅವಳ ವರ್ಗಾವಣೆಯನ್ನು ಬಯಸಿದರೆ ಅಂತಹಾ ಪೋಷಕರು ಮಾರ್ಚ್ 31 ಕ್ಕೆ ಅಥವಾ ಅದಕ್ಕೂ ಮುನ್ನ ನಮಗೆ ತಿಳಿಸಬೇಕು. ಹಾಗೆ ತಿಳಿಸಲು ವಿಪಲವಾದಲ್ಲಿ ಅಂತಹಾ ಪೋಷಕರು ಮುಂಗಡವಾಗಿ ಪಾವತಿಸಿದ ಹಣದಲ್ಲಿ 9,000 ರೂ. ಬಿಟ್ಟುಕೊಡುವಂತೆ ಒತ್ತಾಯಿಸಲಾಗುವುದು". 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com