ಬೆಂಗಳೂರು: ಕಡಿಮೆ ಅಂಕದಿಂದ ಬೇಸತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ದ್ವಿತೀಯ ಪಿಯುಸಿಯಲ್ಲಿ ಅಂದುಕೊಂಡಷ್ಟು ಅಂಕಗಳು ಸಿಗಲಿಲ್ಲವೆಂದು 17 ವರ್ಷದ ವಿದ್ಯಾರ್ಥಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಅಂದುಕೊಂಡಷ್ಟು ಅಂಕಗಳು ಸಿಗಲಿಲ್ಲವೆಂದು 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.

ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ತೇಜಸ್ ಗೌಡ ಶೇಕಡಾ 90 ಅಂಕ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದನು. ಆದರೆ ಸಿಕ್ಕಿದ್ದು ಶೇಕಡಾ 74ರಷ್ಟು ಮಾತ್ರ. ಈತ ರವಿಕುಮಾರ್ ಎಂಬ ರೈತನ ಪುತ್ರನಾಗಿದ್ದು ವಿದ್ಯಾರಣ್ಯಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು.

ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಫಲಿತಾಂಶ ವೀಕ್ಷಿಸಿದ ನಂತರ 1.45ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫಲಿತಾಂಶ ಬಂದ ಮೇಲೆ ತೇಜಸ್ ತೀವ್ರವಾಗಿ ಅಳುತ್ತಿದ್ದ, ತಾನು ಸಮಾಧಾನ ಕೂಡ ಮಾಡಿದ್ದೆ ಎಂದು ತಂದೆ ರವಿಕುಮಾರ್ ತಿಳಿಸಿದ್ದಾರೆ ಎಂದು ಚಿಕ್ಕಜಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪೋಷಕರು ಟಿವಿ ನೋಡುತ್ತಿದ್ದಾಗ ಮನೆಯ ಕೋಣೆಯೊಳಗೆ ತೇಜಸ್ ಹೋದನು. ಕೆಲ ಹೊತ್ತು ಕಳೆದ ನಂತರ ಪೋಷಕರು ಬಾಗಿಲು ಬಡಿದಾಗ ಆಚೆ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲನ್ನು ಮುರಿದು ಒಳಗೆ ಹೋದಾಗ ಫ್ಯಾನಿಗೆ ನೇಣು ಹಾಕಿರುವುದು ಕಂಡು ಗಾಬರಿಯಾದರು. ಕೂಡಲೇ ಚಿಕ್ಕಜಾಲ ಪೊಲೀಸರಿಗೆ ವಿಷಯ ತಿಳಿಸಲಾಯಿತು.
ಮೃತದೇಹವನ್ನು ಶವಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com