ಮನೆಯ ಕಿಟಕಿ ರಿಪೇರಿಗೆಂದು ರುದ್ರಮ್ಮನಿಂದ 2 ಸಾವಿರ ಪಡೆದು ಹೋಗಿದ್ದ ಗೋಪಾಲ್ ಕುಡಿದು ಬಂದು ಊಟಕ್ಕೆ ಮಟನ್ ಸಾಂಬಾರ್ ಮಾಡುವಂತೆ ಗಲಾಟೆ ಮಾಡಿದ್ದ. ಆಗ ಅದಕ್ಕೆ ನಿರಾಕರಿಸಿದ ರುದ್ರಮ್ಮನನ್ನು ಬಾಯಿ ತುಂಬಾ ಬೈಯ್ದು ಹೊಡೆಯಲು ಮುಂದಾಗಿದ್ದ. ಇದರಿಂದ ಬೇಸರಗೊಂಡ ರುದ್ರಮ್ಮ ಮಹಡಿಯ ಕೋಣೆ ಏರಿ ಕುಳಿತಳು. ಆಗ ಗೋಪಾಲ್ ತಾನೇ ಹೋಗಿ ಮಾಂಸ ತಂದು ಬೇಯಿಸಿ ಊಟ ತೀರಿಸಿದ್ದ.