ಮಕ್ಕಳ ಅಪಹರಣ ಸುದ್ದಿ, ಪಾವಗಡ ಗ್ರಾಮಸ್ಥರಲ್ಲಿ ಆತಂಕ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಪೋಲಿಸ್

ಮಕ್ಕಳನ್ನು ಅಪಹರಿಸಿ ಕಿಡ್ನಿ ಸೇರಿದಂತೆ ಅಂಗಾಂಗ ಕದಿಯುತ್ತಾರೆ ಎಂಬ ವಾಟ್ಸ್ ಸಂದೇಶ ಜಿಲ್ಲೆಯ ಹಲವು ಹಳ್ಳಿಗಳ ಜನರಲ್ಲಿ ಆತಂಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು: ಮಕ್ಕಳನ್ನು ಅಪಹರಿಸಿ ಕಿಡ್ನಿ ಸೇರಿದಂತೆ ಅಂಗಾಂಗ ಕದಿಯುತ್ತಾರೆ ಎಂಬ ವಾಟ್ಸ್ ಸಂದೇಶ ಜಿಲ್ಲೆಯ ಹಲವು ಹಳ್ಳಿಗಳ ಜನರಲ್ಲಿ ಆತಂಕ ಮೂಡಿಸಿದೆ. 
ಆಂಧ್ರಪ್ರದೇಶದಿಂದ ಮಕ್ಕಳ ಕಳ್ಳರು ಬರುತ್ತಾರೆ. ರಾತ್ರಿ ಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂಬ ವಾಟ್ಸಾಪ್ ಸಂದೇಶವೇ ಈ ಭೀತಿಗೆ ಕಾರಣವಾಗಿದೆ.
ಕಾಕತಾಳೀಯ ಎಂಬಂತೆ ಭಾನುವಾರ ರಾತ್ರಿ ದೊಡ್ಡಹಳ್ಳಿಯಲ್ಲಿ ಯುವತಿ ನಾಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ.
ಆದರೆ, ಪೊಲೀಸರು ಇಂತಹ ಪ್ರಕರಣ ನಡೆದಿಲ್ಲ. ಬರೀ ಉಹಾಪೋಹ. ಗ್ರಾಮಸ್ಥರಲ್ಲಿನ ಭೀತಿ ಹೋಗಲಾಡಿಸಲಾಗುವುದು ಎಂದು ಹೇಳಿದ್ದಾರೆ.
ದೊಡ್ಡಹಳ್ಳಿ, ಪೊನ್ನಸಮುದ್ರದಲ್ಲಿ ಭೀತಿಗೊಂಡ ಜನರು ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಕಳ್ಳರಿಗಾಗಿ ಕಾದು ಕೂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com